ವಿಜಯೇಂದ್ರ ಒಳ್ಳೆಯ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ –ಗೃಹ ಸಚಿವ ಡಾ.ಪರಮೇಶ್ವರ್​

ಬೆಂಗಳೂರು,ನವೆಂಬರ್,15,2023(www.justkannada.in):  ಇಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಿಜಯೇಂದ್ರ ಒಳ್ಳೆಯ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ  ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್,  ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಸ್ವೀಕಾರ ವಿಚಾರ ಇದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ರಾಜ್ಯದ ದೃಷ್ಟಿಯಿಂದ ವಿರೋಧ ಪಕ್ಷ ಬಲಿಷ್ಠವಾಗಿರಬೇಕು. ಸರ್ಕಾರವನ್ನು ಪಾಸಿಟಿವ್ ಆಗಿ ಎಚ್ಚರಿಸಬೇಕೆಂಬುದು ನಮ್ಮ ಅಪೇಕ್ಷೆ. ಯಾವುದೇ ಸರ್ಕಾರ ಇದ್ದರೂ ಅದನ್ನು ನಿರೀಕ್ಷೆ ಮಾಡುತ್ತೇವೆ ಎಂದರು.

ಹಾಗೆಯೇ ಬಿವೈ ವಿಜಯೇಂದ್ರ ಒಳ್ಳೇ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Key words: Vijayendra –not- good -organizer – Home Minister -Dr. Parameshwar