ಕಾಂಗ್ರೆಸ್ ಸೇರ್ಪಡೆಯಾದ ಜೆಡಿಎಸ್ ಮಾಜಿ ಶಾಸಕರು.

ಬೆಂಗಳೂರು,ನವೆಂಬರ್,15,2023(www.justkannada.in):  ಬಿಜೆಪಿ ಹಾಗೂ ಜೆಡಿಎಸ್‌ ನ ಅಸಮಾಧಾನಿತ ನಾಯಕರನ್ನ ಕಾಂಗ್ರೆಸ್ ಸೆಳೆಯುತ್ತಿದ್ದು ಇದೀಗ ಜೆಡಿಎಸ್ ನಾಯಕರಿಗೆ ಶಾಕ್ ನೀಡಿದ್ದಾರೆ. ಜೆಡಿಎಸ್‌ ನ ಇಬ್ಬರು ಮಾಜಿ ಶಾಸಕರನ್ನ ಕಾಂಗ್ರೆಸ್ ಗೆ  ಸೇರ್ಪಡೆ ಮಾಡಿಕೊಂಡಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು  ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ  ಡಿಸಿಎಂ ಡಿ.ಕೆ ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಗೌರಿಶಂಕರ್ ಸೇರ್ಪಡೆ ಕಾರ್ಯಕ್ರಮಕ್ಕೆ ತುಮಕೂರು ನಾಯಕರೇ ಗೈರಾಗಿದ್ದಾರೆ.

Key words: JDS -Former MLA – joined -Congress.