Tuesday, September 29, 2026

BDA Apartments

ಪಂಚಭೂತಗಳಲ್ಲಿ ಲೀನರಾದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ BDA JK_Adv BDA Adv
Home Cinema ಪಂಚಭೂತಗಳಲ್ಲಿ ಲೀನರಾದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ.

ಪಂಚಭೂತಗಳಲ್ಲಿ ಲೀನರಾದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ.

ಬೆಂಗಳೂರು,ಆಗಸ್ಟ್,9,2023(www.justkannada.in): ಕಳೆದ ಎರಡು ದಿನಗಳ ಹಿಂದೆ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಿಧನರಾದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಇಂದು ಈಡಿಗ ಸಂಪ್ರದಾಯದಂತೆ ಶ್ರೀರಾಂಪುರದ ಹರಿಶ್ಚಂದ್ರಘಾಟ್ ನಲ್ಲಿ ನೆರವೇರಿತು.

ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದ ಸ್ಪಂದನಾ ಅವರ ಮೃತದೇಹವನ್ನ ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಚಿತ್ರರಂಗದ ಕಲಾವಿದರು, ರಾಜಕಾರಣಿಗಳು ಗಣ್ಯಾತೀಗಣ್ಯರು ಅಂತಿಮ ನಮನ ಸಲ್ಲಿಸಿದರು.

ಬಳಿಕ ಹರಿಶ್ಚಂದ್ರಘಾಟ್ ವರೆಗೆ ಅಂತಿಮಯಾತ್ರೆ ನಡೆಸಿ ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪತಿ ವಿಜಯರಾಘವೇಂದ್ರ ಮತ್ತು ಪುತ್ರ ಶೌರ್ಯ ಅಂತಿಮ ವಿಧಿವಿಧಾನ ನೆರವೇರಿಸಿದರು. ಈ ಮೂಲಕ ಕುಟುಂಬಸ್ಥರು, ಸಂಬಂಧಿಕರಿಂದ ಸ್ಪಂದನಾರಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.

ಅಂತ್ಯಕ್ರಿಯೆ ವೇಳೆ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ, ಚಿಕ್ಕಪ್ಪ ಬಿಕೆ ಹರಿಪ್ರಸಾದ್,  ಮೈದುನ ಶ್ರೀಮುರುಳಿ, ಮಾವ ಚಿನ್ನೆಗೌಡ ಇದ್ದರು.

Key words: Vijayaraghavendra’s wife- Spandana- funeral-bangalore