ಗುಜರಾತ್ ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದಕ್ಕೆ ಸ್ಪಷ್ಟನೆ ನೀಡಿದ ವಿಜಯ್ ರೂಪಾನಿ.

ಗುಜರಾತ್,ಸೆಪ್ಟಂಬರ್,11,2021(www.justkannada.in):  ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿರುವ ವಿಜಯ್ ರೂಪಾನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿರುವ ವಿಜಯ್ ರೂಪಾನಿ, ಇದು ಪಕ್ಷದ ನಿರ್ಧಾರ.  ನನ್ನ ರಾಜೀನಾಮೆಯಲ್ಲಿ ಯಾವುದೇ ರೀತಿ ಗೊಂದಲ್ಲ ಇಲ್ಲ. ಪಕ್ಷದ ನಿರ್ಧಾರ ಕುರಿತು ಯಾವುದೇ ಗೊಂದಲ ಇಲ್ಲ.ಈವರೆಗೆ ಅವಕಾಶ ನೀಡಿದ  ಪ್ರಧಾನಿ ಮೋದಿಗೆ ಧನ್ಯವಾದಗಳು ಎಂದರು.

ಇನ್ನು ನನಗೆ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಮುಂದೆ ಪಕ್ಷ ಯಾವುದೇ ಹುದ್ದೆ ನೀಡಿದ್ರೂ ಜವಾಬ್ದಾರಿ ನಿಭಾಯಿಸಲು ಸಿದ್ಧ. ಪ್ರಧಾನಿ ಮೋದಿ ಹೆಸರಿನಲ್ಲಿ ಮುಂದಿನ ಚುನಾವಣೆಯಲ್ಲಿ ಮತಯಾಚನೆ ಮಾಡಲಾಗುತ್ತದೆ. ಮುಂದಿನ ಮುಖ್ಯಮಂತ್ರಿ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದು  ವಿಜಯ್ ರೂಪಾನಿ ತಿಳಿಸಿದರು.

Key words: Vijay Rupani- clarified- his- sudden- resignation- as -Gujarat CM -position