‘ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ನೀಡಿದ್ರು’- ಸಚಿವ ಸ್ಥಾನ ಕಳೆದುಕೊಂಡ ಬಳಿಕ ಹೊಸ ಬಾಂಬ್ ಸಿಡಿಸಿದ ಶ್ರೀಮಂತ ಪಾಟೀಲ್.

ಬೆಳಗಾವಿ,ಸೆಪ್ಟಂಬರ್,11,2021(www.justkannada.in):   ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ನೀಡಿದ್ದರು. ‘ನಿಮಗೆ ಎಷ್ಟು ಹಣ ಬೇಕು ಎಂದು  ಕೇಳಿದ್ದರು ಎಂದು ಬಿಜೆಪಿ ವಿರುದ್ದವೇ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ಸ್ಥಾನ ಕಳೆದುಕೊಂಡ ಬಳಿಕ ಶ್ರೀಮಂತ ಪಾಟೀಲ್  ಈ ಸ್ಪೋಟಕ ಹೇಳಿಕೆ ನೀಡಿದ್ದಾರೆ.  ಕಾಗವಾಡದಲ್ಲಿ ಈ ಬಗ್ಗೆ ಇಂದು ಮಾತನಾಡಿದ ಅವರು, ಆಪರೇಷನ್ ಕಮಲದ ವೇಳೆ ಬಿಜೆಪಿ ನಾಯಕರು ಹಣದ ಆಮಿಷ ನೀಡಿದ್ದರು. ಆದರೆ ನಾನು ಹಣ ಬೇಡ ಸರ್ಕಾರ ರಚನೆಯಾದ ಬಳಿಕ ಸೂಕ್ತ ಸ್ಥಾನಮಾನ ನೀಡಿ  ಎಂದು ಕೇಳಿದ್ದೆ. ಹೀಗಾಗಿ ನಾನು ಹಣ ಪಡೆಯದೇ ಬಿಜೆಪಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ  ಶ್ರೀಮಂತ ಪಾಟೀಲ್  ಸಮ್ಮಿಶ್ರ ಸರ್ಕಾರದ ಪತನದ ವೇಳೆ ಬಿಜೆಪಿ ಸೇರಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಈ ಮಧ್ಯೆ ಸಿಎಂ ಸ್ಥಾನದಿಂದ ಬಿಎಸ್ ವೈ ಅವರನ್ನ ಕೆಳಗಿಸಿ ಬಸವರಾಜ ಬೊಮ್ಮಾಯಿ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ ವೇಳೆ ಶ್ರೀಮಂತ್ ಪಾಟೀಲ್ ಗೆ ಸಚಿವ ಸ್ಥಾನದಿಂದ ಕೋಕ್ ನೀಡಲಾಗಿದೆ.

Key words: Offer -money –oparation kamala- shrimanth Patil