Monday, September 21, 2026

BDA Apartments

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನೋಡಲು ಓವಲ್ ಶ್ಟೇಡಿಯಂಗೆ ಬಂದ ವಿಜಯ್...
Home Front Page ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನೋಡಲು ಓವಲ್ ಶ್ಟೇಡಿಯಂಗೆ ಬಂದ ವಿಜಯ್ ಮಲ್ಯ

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನೋಡಲು ಓವಲ್ ಶ್ಟೇಡಿಯಂಗೆ ಬಂದ ವಿಜಯ್ ಮಲ್ಯ

ಟೌಂಟನ್:(www.justkannada.in) ಮದ್ಯದ ದೊರೆ ವಿಜಯ್ ಮಲ್ಯ, ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯವನ್ನು ನೋಡಲು ಆಗಮಿಸಿದ್ದು, ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಕ್ರೀಡಾಂಗಣದ ಗೇಟ್ ಬಳಿ ಮಲ್ಯ ಟಿಕೆಟ್ ನೀಡಿ ಒಳ ಹೋಗುತ್ತಿದ್ದವೇಳೆ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸಲು ನಿರಾಕರ್ಸಿದರು. ಬಳಿಕ ನಾನು ಮ್ಯಾಚ್ ನೋಡಲು ಬಂದಿದ್ದೇನೆ ಎಂದು ಕ್ರಿಡಾಂಗಣದ ಒಳಗೆ ಹೋದರು.

ಐಸಿಸಿ 2019 ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾವು ತನ್ನ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕೊಹ್ಲಿ ಪಡೆ 27 ಓವರ್ ನಲ್ಲಿ ಒಂದು ವಿಕೇಟ್ ನಷ್ಟಕ್ಕೆ 153 ರನ್ ಕಲೆ ಹಾಕಿದೆ.

ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದಾರೆ. ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ. ಆದರೆ ಈ ಸಂಬಂಧ ವಿಚಾರಣೆ ಮುಂದೂಡಲಾಗಿದೆ.

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನೋಡಲು ಓವಲ್ ಶ್ಟೇಡಿಯಂಗೆ ಬಂದ ವಿಜಯ್ ಮಲ್ಯ
Vijay Mallya arrives at The Oval cricket ground to watch Ind vs Aus match; says, “I am here to watch the game