ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರ ಯಡವಟ್ಟು: ಕೊರೋನಾ ಸೋಂಕಿತ ಯುವತಿ ಜತೆ ಸುತ್ತಾಡಿದ ಡಾಕ್ಟರ್…  

ಬೆಂಗಳೂರು,ಮಾ,18,2020(www.justkannada.in):  ರಾಜ್ಯದೆಲ್ಲೆಡೆ ಕೊರೋನಾ ಭೀತಿ ಹೆಚ್ಚಾಗಿದ್ದು ಈ ನಡುವೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವೈದ್ಯರೊಬ್ಬರು ಬ್ರಿಟನ್ ನಿಂದ ಬಂದಿದ್ದ ಕೊರೋನಾ ಸೋಂಕಿತ ಯುವತಿ ಜತೆ ಆಸ್ಪತ್ರೆ ಆವರಣದಲ್ಲಿ ಸುತ್ತಾಡಿ ಯಡವಟ್ಟು ಮಾಡಿರುವ ಘಟನೆ ವರದಿಯಾಗಿದೆ.

ಲಂಡನ್​ನಿಂದ ಬಂದ ಯುವತಿಗೆ ಕೊರೋನಾ ಸೋಂಕು  ಪಾಸಿಟಿವ್ ಇರುವುದು ದೃಢವಾಗಿದೆ. ಆದರೆ ಬ್ರಿಟನ್ ನಿಂದ ಬಂದಿದ್ದ ಈ ಸೋಂಕಿತ ಯುವತಿಯ ಜತೆ ವಿಕ್ಟೋರಿಯಾ ಆಸ್ಪತ್ರೆಯ ನೆಪ್ರೋಯುರಾಲಾಜಿ  ವೈದ್ಯರೊಬ್ಬರು ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ  ಕೊರೋನಾ ಸೋಂಕಿತ ಯುವತಿ ಜತೆ ವೈದ್ಯ  ಸುತ್ತಾಡಿದ್ದಾರೆ. ಅದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ.

ವಿದೇಶದಿಂದ ಬಂದ ನಂತರ ಈ ಯುವತಿ ಮನೆಯಲ್ಲಿ ಇರಬೇಕಿತ್ತು. ಆದರೆ ಅವರು ವೈದ್ಯರ ಜೊತೆ ಆಸ್ಪತ್ರೆಯ ಆವರಣದಲ್ಲಿ ಓಡಾಡಿಕೊಂಡಿದ್ದರು. ಇನ್ನು ನೆಪ್ರೋಯುರಾಲಜಿ ವೈದ್ಯ ಕೂಡ ಆಸ್ಪತ್ರೆಯ ಕೆಲ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ಯುವತಿಗೆ ಸೋಂಕು ಇರುವ ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯರು ರಜೆ ಹಾಕಿದ್ದು ಇದೀಗ ನೆಫ್ರೋಯುರಾಲಾಜಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಆತಂಕ ಮನೆ ಮಾಡಿದೆ.

Key words:  Victoria Hospital- Doctor- Yadavattu-coronavirus- infected- young woman.