‘ಏನಾದರೂ ಆಗು, ಮೊದಲು ಮಾನವನಾಗು’: ಧನಂಜಯ್- ಚಕ್ರವರ್ತಿ ಸೂಲಿಬೆಲೆ ‘ಟ್ವಿಟ್ಟರ್ ತಿಕ್ಕಾಟ’!

ಬೆಂಗಳೂರು, ಮಾರ್ಚ್ 18, 2020 (www.justkannada.in): ನಟ ಧನಂಜಯ್ ಮಾಡಿರುವ ಟ್ವೀಟ್‌ ಎಲ್ಲರ ಗಮನ ಸೆಳೆಯುತ್ತಿದೆ.

‘ಏನಾದರೂ ಆಗು, ಮೊದಲು ಮಾನವನಾಗು’ ಎಂಬ ವಿಶ್ವಕವಿ ಕುವೆಂಪು ಅವರ ಪದ್ಯದ ಒಂದು ಸಾಲನ್ನಷ್ಟೆ ಡಾಲಿ ಧನಂಜಯ್ ಟ್ವೀಟ್ ಮಾಡಿದ್ದಾರೆ.

ಡಾಲಿ ಧನಂಜಯ್ ಅವರು ‘ಏನಾದರೂ ಆಗು, ಮೊದಲು ಮಾನವನಾಗು’ ಎಂದು ಸಲಹೆ ನೀಡಿರುವುದು ಯುವ ಬ್ರಿಗೇಡ್‌ ನ ಚಕ್ರವರ್ತಿ ಸೂಲಿಬೆಲೆಗೆ.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆಗೆ ‘ಮಾನವನಾಗು’ ಎಂದು ಧನಂಜಯ್ ಸಲಹೆ ನೀಡಲು ಅವರು ಇಂದು ಕೊರೊನಾ ವೈರಸ್ ಕುರಿತಾಗಿ ಇಟಲಿ ಪರಿಸ್ಥಿತಿ ಕುರಿತಾದ ಸುದ್ದಿಯೊಂದರ ಲಿಂಕ್ ಅನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡು, ‘ಜೀಸಸ್ ಲವ್ಸ್‌ ಎವರಿ ಒನ್’ ಎಂದು ವ್ಯಂಗ್ಯ ಮಾಡಿದ್ದರು. ಇದಕ್ಕೆ ಧನಂಜಯ್ ಸೂಕ್ಷ್ಮವಾಗಿಯೇ ಪ್ರತಿಕ್ರಿಯಿಸಿದ್ದಾರೆ.