Sunday, September 13, 2026

BDA Apartments

ಹಿರಿಯ ನಟ ಶಿವರಾಂಗೆ ಅಂತಿಮ ನಮನ ಸಲ್ಲಿಸಿದ ಕಲಾವಿದರು, ಗಣ್ಯಾತೀಗಣ್ಯರು BDA JK_Adv B...
Home Cinema ಹಿರಿಯ ನಟ ಶಿವರಾಂಗೆ ಅಂತಿಮ ನಮನ ಸಲ್ಲಿಸಿದ ಕಲಾವಿದರು, ಗಣ್ಯಾತೀಗಣ್ಯರು.

ಹಿರಿಯ ನಟ ಶಿವರಾಂಗೆ ಅಂತಿಮ ನಮನ ಸಲ್ಲಿಸಿದ ಕಲಾವಿದರು, ಗಣ್ಯಾತೀಗಣ್ಯರು.

ಬೆಂಗಳೂರು,ಡಿಸೆಂಬರ್,5,2021(www.justkannada.in):  ಪೂಜೆ ವೇಳೆ ಬಿದ್ದು ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ  ಹಿರಿಯ ನಟ ಶಿವರಾಂ ಅವರಿಗೆ ಕಲಾವಿದರು, ಗಣ್ಯಾತೀಗಣ್ಯರು ಇಂದು ಅಂತಿಮ ನಮನ ಸಲ್ಲಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಶಿವರಾಂ ಅವರ ಪಾರ್ಥಿವ ಶರೀರವನ್ನ ಅಂತಿಮದರ್ಶನಕ್ಕೆ ಇಡಲಾಗಿತ್ತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ,ಜಯಮಾಲಾ, ತಾರಾ, ಸುಧಾರಾಣಿ ಹಾಗೂ ಹಿರಿಯ ನಟ ಜೈಜಗದೀಶ್ ಸೇರಿದಂತೆ ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದರು.

ಶಿವರಾಂ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಭಾರತಿ ವಿಷ್ಣುವರ್ಧನ್,  ಭಾವನೆಗಳಿಗೆ ಪದಗಳೇ ಇಲ್ಲದಂತಾಗಿದೆ. ಶಿವರಾಂ ಅವರು 55 ವರ್ಷದಿಂದ ಕುಟುಂಬಕ್ಕೆ ಪರಿಚಿತರು ಅವರು ಎಲ್ಲರಿಗೂ ಸಹಾಯ ಮಾಡುವ ಮನಸ್ಸು ಹೊಂದಿದ್ದರು. ಅವರೊಂದಿಗಿನ ಒಡನಾಟ ನಮ್ಮ ಭಾಗ್ಯ.  ಶಿವರಾಂ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದರು.

Key words: veteran -actor- Shivaram-death- Artists –bangalore