75ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟ ಅನಂತನಾಗ್

ಬೆಂಗಳೂರು, ಸೆಪ್ಟೆಂಬರ್ 04, 2022 (www.justkannada.in): ಹಿರಿಯ ನಟ ಅನಂತನಾಗ್ ಅವರಿಗೆ ಇಂದು 75ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ತಮ್ಮ ಸಹಜ ಅಭಿನಯದಿಂದ ಎಲ್ಲರ ಮನ ಗೆದ್ದಿರುವ ಈ ಹಿರಿಯ ನಟ, ಹಾಸ್ಯ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

75ನೇ ವರ್ಷಕ್ಕೆ ಕಾಲಿಟ್ಟಿರುವ ಅನಂತ್ ನಾಗ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಹಿಂದಿ ಚಿತ್ರಗಳಲ್ಲೂ ಸಹ ಅನಂತ್ ನಾಗ್ ಕಾಣಿಸಿಕೊಂಡಿದ್ದು, ಜೊತೆಗೆ ಮಾಲ್ಗುಡಿ ಡೇಸ್ ಧಾರಾವಾಹಿಯಿಂದ ದೇಶದಾದ್ಯಂತ ಮನೆ ಮಾತಾಗಿದ್ದಾರೆ.

, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ, ಗೌರಿ ಗಣೇಶ, ಗಣೇಶನ ಮದುವೆ, ಹೆಂಡ್ತಿಗೇಳ್ಬೆಡಿ ಇಂದಿಗೂ ಮನೆ ಮಾತಾಗಿರುವ ಚಿತ್ರಗಳು.