ಕಾರ್ತಿಕ ಮಾಸದಲ್ಲಿ ಗಂಡಾಂತರ ಕಾದಿದೆ: ಕೋಡಿಶ್ರೀ ಎಚ್ಚರಿಕೆ

ಬೆಂಗಳೂರು, ಸೆಪ್ಟೆಂಬರ್ 04, 2022 (www.justkannada.in): ಕಾರ್ತಿಕ ಮಾಸದಲ್ಲಿ ಗಂಡಾಂತರ ಕಾದಿದೆ ಎಂದು ಕೋಡಿಶ್ರೀಗಳು ಎಚ್ಚರಿಸಿದ್ದಾರೆ.

ಜಲಪ್ರಳಯ ವಿಷಯವನ್ನು ಕೋಡಿಮಠದ ಶ್ರೀಗಳು ಮತ್ತೆ ಹುಬ್ಬಳ್ಳಿಯಲ್ಲಿ ಪುನರುಚ್ಚಿಸಿದ್ದಾರೆ. ಜಲಪ್ರಳಯವಾಗಲಿದೆ ಎಂದು ಏಪ್ರಿಲ್ ತಿಂಗಳಲ್ಲೇ ಕೋಡಿಶ್ರೀಗಳು ಹೇಳಿದ್ದರು.

ಮಳೆಯಿಂದಾಗಿ ಕಾರ್ತಿಕದಲ್ಲಿ ಇನ್ನೂ ತೊಂದರೆಯಾಗಲಿದೆ ಎಂದಿದ್ದು, ದೇವರ ಸ್ಮರಣೆಯೇ ಇದಕ್ಕೆಲ್ಲಾ ಪರಿಹಾರ ಎಂದಿದ್ದಾರೆ.

ಅಂದಹಾಗೆ ದೇಶದಲ್ಲಿ ಮತೀಯ ಗಲಭೆ ಸಂಭವಿಸಲಿದೆ ಎಂದು ಕೋಡಿಶ್ರೀಗಳು ಜೂನ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನುಡಿದಿದ್ದರು. ಅದರಂತೆಯೇ, ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಅಗ್ನಿಭಂಗ, ಭೂಕಂಪ ಹೆಚ್ಚಾಗುವ ಲಕ್ಷಣಗಳಿವೆ. ಇಂದಿನಿಂದ ಮುಂದಕ್ಕೆ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ, ಜನತೆಗೆ ಸುಖಶಾಂತಿ ಸಿಗುತ್ತದೆ. ಜಲದ ಸಮಸ್ಯೆ ಮುಂದೆಯೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಭವಿಷ್ಯ ನುಡಿದಿದ್ದಾರೆ.