Sunday, October 11, 2026

Dasara Wishes

Happy Dasara
Home Front Page ‘ವಯನಾಡ್‌ ಪ್ರಕೃತಿ ವಿಕೋಪ- ಮಾಧ್ಯಮ ಸವಾಲು’ : ಆ.17ಕ್ಕೆ ಸಂವಾದ

‘ವಯನಾಡ್‌ ಪ್ರಕೃತಿ ವಿಕೋಪ- ಮಾಧ್ಯಮ ಸವಾಲು’ : ಆ.17ಕ್ಕೆ ಸಂವಾದ

ಮೈಸೂರು,ಆಗಸ್ಟ್,15,2024 (www.justkannada.in):  ‘ವಯನಾಡ್ ಪ್ರಕೃತಿ ವಿಕೋಪ- ಮಾಧ್ಯಮ ಸವಾಲು ಕುರಿತು ಆಗಸ್ಟ್ 17ರಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿರುವ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಕೆ.ದೀಪಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಯನಾಡ್‌ಗೆ ತೆರಳಿ ವರದಿಗಾರಿಕೆ ಮಾಡಿದ ನಗರದ ಪತ್ರಕರ್ತರಾದ ಕೆ.ಶಿವಕುಮಾರ್, ರಶ್ಮಿ ಕೋಟಿ, ರಂಗಸ್ವಾಮಿ ಎಂ. ಮಾದಾಪುರ, ಎಸ್‌.ಕೆ. ಚಂದ್ರಶೇಖ‌ರ್ ಅವರು ಸಂವಾದದಲ್ಲಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಆಡಳಿತ ತರಬೇತಿ ಸಂಸ್ಥೆಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಮುಖ್ಯಸ್ಥ ಅಶೋಕ್ ಎಸ್. ಸಂಗನಾಳ, ‘ವಿಕೋಪ ಸಂದರ್ಭಗಳ ನಿರ್ವಹಣೆ’ ಕುರಿತು ವಿಷಯ ಮಂಡಿಸುತ್ತಾರೆ. ವಯನಾಡ್ ಸಂತ್ರಸ್ತರಿಗೆ ನೆರವಾಗಿರುವ ಅನ್ವೇಷಣಾ ಸೇವಾ ಟ್ರಸ್ಟ್‌ ನ ಸಂಸ್ಥಾಪಕ ಅಮರನಾಥ ರಾಜೇ ಅರಸ್‌ ಪಾಲ್ಗೊಳ್ಳಲಿದ್ದಾರೆ.

Key words: ‘Vayanad, Natural Disaster, Media Challenge, mysore