Saturday, August 1, 2026

BDA Apartments

Home Front Page 6 ತಿಂಗಳು ಮುಖ್ಯಮಂತ್ರಿ ಮಾಡಿದರೆ ಎಲ್ಲ ಮಾಫಿಯಾಗಳನ್ನು ಮಟ್ಟ ಹಾಕ್ತೇನೆ ಎಂದ ವಾಟಾಳ್ ನಾಗರಾಜ್

6 ತಿಂಗಳು ಮುಖ್ಯಮಂತ್ರಿ ಮಾಡಿದರೆ ಎಲ್ಲ ಮಾಫಿಯಾಗಳನ್ನು ಮಟ್ಟ ಹಾಕ್ತೇನೆ ಎಂದ ವಾಟಾಳ್ ನಾಗರಾಜ್

ಮೈಸೂರು, ಜೂನ್ 13, 2021 (www.justkannada.in): ಸುಮಾರು 25 ವರ್ಷ ದಿಂದ ಮೈಸೂರಿನಲ್ಲಿ ನಡೆದಿರುವ ಭೂ ಹಗರಣ, ಸಮಗ್ರವಾಗಿ ತನಿಖೆ ಆಗಬೇಕು. ಅರಣ್ಯಭೂಮಿ, ಕೆರೆ ಒತ್ತುವರಿಯಾಗಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿರುವ ವಾಟಾಳ್ ನಾಗರಾಜ್ 6 ತಿಂಗಳು ನನಗೆ ಮುಖ್ಯಮಂತ್ರಿ ಪದವಿ ಕೊಟ್ಟರೆ ಎಲ್ಲವನ್ನೂ ಮಟ್ಟ ಹಾಕುವುದಾಗಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮೇಲೆ ನಮಗೆ ನಂಬಿಕೆ ಇಲ್ಲ . ಯಡಿಯೂರಪ್ಪ ಧೈರ್ಯ ಮಾಡಿ ತನಿಖೆ ಮಾಡುತ್ತಾರೆ ಎಂಬುವ ನಂಬಿಕೆ ಇಲ್ಲ. ಸತ್ಯವಂತರ ರಾಜ್ಯ ಬರಬೇಕು. ನನಗೆ ಜವಾಬ್ದಾರಿ ಕೊಟ್ಟರೆ 6 ತಿಂಗಳು ಸರ್ಕಾರ ನಡೆಸಿ ತೋರಿಸುವೆ ಎಂದಿದ್ದಾರೆ.

ಈ ರಾಜ್ಯ ಬಸವಣ್ಣರ ರಾಜ್ಯ ಆಗಬೇಕು. ಈ ಸರ್ಕಾರ ಆಗಿರುವುದೇ ಭ್ರಷ್ಟಾಚಾರ ದಿಂದ. ರೋಹಿಣಿ ಸಿಂಧೂರಿ ಒಬ್ಬ ದಕ್ಷ ಅಧಿಕಾರಿ, ತನಿಖೆ ಆಗುವ ಮೊದಲ ಓಡಿಸಿದ ಸರ್ಕಾರದಿಂದ ಉತ್ತಮ ಆಡಳಿತ ಸಾಧ್ಯವಿಲ್ಲ. ಲಕ್ಷಲಕ್ಷ, ಕೋಟಿ ನುಂಗಿದ್ದಾರೆ. ಎಲ್ಲಾ ಬಹುತೇಕೆ ರಾಜಕರಿಣಿಗಳಿಂದಲೇ ನಡೆಯುತ್ತಿದೆ. ಪ್ರಾಮಾಣಿಕರಿದ್ದರೆ ಇದ್ದರೆ ರೋಹಿಣಿ ಸಿಂಧೂರಿ ಅವರನ್ನೇ ತನಿಖೆಗೆ ನೇಮಿಸಿ ಎಂದು ಒತ್ತಾಯಿಸಿದ್ದಾರೆ.