ಮೈಸೂರಿನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್

ಮೈಸೂರು, ಜೂನ್ 13, 2021 (www.justkannada.in): ಸ್ಯಾಂಡಲ್ ವುಡ್ ನಿರ್ದೇಶಕ ಭರ್ಜರಿ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಮಾನಸ ಜೊತೆ ಸಪ್ತಪದಿ ತುಳಿದಿದ್ದಾರೆ ಈ ಯುವ ನಿರ್ದೇಶಕ. ಮೈಸೂರಿನ ಇನ್ಫೋಸಿಸ್ ನಲ್ಲಿ ಕೆಲಸ ಮಾಡ್ತಿರುವ ಮಾನಸ ಅವರ ಜತೆ ಇಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನವ ಜೋಡಿಗೆ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ನಿರ್ಮಾಪಕ ಉಮಾಪತಿ ಶುಭ ಹಾರೈಸಿದ್ದಾರೆ.

ಸದ್ಯ ಅಪ್ಪು ನಟನೆಯ ಜೇಮ್ಸ್ ಸಿನಿಮಾಕ್ಕೆ ಚೇತನ್ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ.