ಸಿದ್ಧರಾಮಯ್ಯ ಅವರಿಗೆ ವರುಣ ಲಕ್ಕಿ ಕ್ಷೇತ್ರ: ಗೆದ್ದರೆ ಸಿಎಂ ಆಗುವ ಅವಕಾಶ – ಯತೀಂದ್ರ ಸಿದ‍್ಧರಾಮಯ್ಯ ನುಡಿ.

ಮೈಸೂರು,ನವೆಂಬರ್,30,2022(www.justkannada.in): ಸಿದ್ದರಾಮಯ್ಯ ಅವರಿಗೆ ವರುಣ ಲಕ್ಕಿ ಕ್ಷೇತ್ರ. ತಂದೆಯವರು ವರುಣಾಗೆ ಬರಬೇಕೆಂದು ಒತ್ತಾಯ ಮಾಡುತ್ತೇನೆ. ಕೊನೆ ಚುನಾವಣೆ ವರುಣಾದಿಂದ ಸ್ಪರ್ಧಿಸಲಿ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಅಪ್ಪ ವರುಣಗೆ ಬಂದರೆ ನಾನು ಸ್ಪರ್ಧಿಸಲ್ಲ. ವರುಣಾದಲ್ಲಿ ಸಿದ್ದರಾಮಯ್ಯ ಅವರು ಗೆದ್ದರೆ ಸಿಎಂ ಆಗುವ ಅವಕಾಶವಿದೆ ಎಂದು ನುಡಿದರು.

ಬಿಜೆಪಿ ನಾಯಕ ಸಿ ಟಿ ರವಿ ವಿರುದ್ಧ ಕಿಡಿಕಾರಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯವರು ಕೇವಲ ಹಿಂದುತ್ವವಾದಿಗಳು. ನಾವೇ ನಿಜವಾದ ಹಿಂದೂಗಳು. ಬಿಜೆಪಿ ಅಧಿಕಾರದ ಅವಧಿಯಲ್ಲೇ ಹಿಂದೂಗಳ ಹತ್ಯೆ ಹೆಚ್ಚಾಗಿ ನಡೆದಿದೆ ಎಂದು ಟೀಕಿಸಿದರು.

Key words: Varuna- Lucky- Constituency – Siddaramaiah:-Yatindra Siddharramaiah.