ರಿಟ್ ಅರ್ಜಿ ವಜಾಗೊಳಿಸಿ ಪಿಎಫ್ ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್.

ಬೆಂಗಳೂರು,ನವೆಂಬರ್,30,2022(www.justkannada.in): ಪಿಎಫ್‍ಐ  ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ  ಹೈಕೋರ್ಟ್ ವಜಾಗೊಳಿಸಿದೆ.

ಪಿಎಫ್ ಐ  ನಿಷೇಧಿಸಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿಷೇಧ ಆದೇಶವನ್ನ ಪ್ರಶ್ನಿಸಿ ಪಿಎಫ್ಐ  ಅಧ್ಯಕ್ಷ ನಾಸಿರ್ ಪಾಷ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ರಿಟ್ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಪಿಎಫ್‍ಐ ನಿಷೇಧವನ್ನ ಎತ್ತಿ ಹಿಡಿದಿದೆ. ಈ ಮೂಲಕ ಪಿಎಫ್ ಐಗೆ ಮತ್ತೆ ಹಿನ್ನೆಡೆಯಾಗಿದೆ.

Key words: High Court -dismissed – writ petition – upheld -PFI ban.