ಪಕ್ಷದ ಕಾರ್ಯಕರ್ತನಾಗಿ ವರಣಾ ಕ್ಷೇತ್ರ ಬಿಟ್ಟುಕೊಡಲು ಸಿದ್ಧ- ಶಾಸಕ ಯತೀಂದ್ರ ಸಿದ್ಧರಾಮಯ್ಯ.

ಬೆಂಗಳೂರು,ಅಕ್ಟೋಬರ್, 17,2022(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯಗೆ ವರುಣಾ ಕ್ಷೇತ್ರವನ್ನ ಬಿಟ್ಟುಕೊಡುವ ಕುರಿತು ಶಾಸಕ ಯತೀಂದ್ರ ಸಿದ‍್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವರುಣಾದಲ್ಲಿ ಅಪ್ಪ ನಿಂತರೇ ನಾನು ಎಲ್ಲೂ ಸ್ಪರ್ಧೆ ಮಾಡಲ್ಲ. ವರಣಾದಲ್ಲಿ ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ.  ವರುಣ ಕ್ಷೇತ ಅಥವಾ ಬೇರೆ ಕಡೆಯಾದರೂ ನಿಲ್ಲಬಹುದು. ಸಿದ್ಧರಾಮಯ್ಯ ಅವರು ಎಲ್ಲಿ ನಿಲ್ಲಬೇಕೆಂದು ಇನ್ನೂ ತೀರ್ಮಾನಿಸಿಲ್ಲ ಎಂದರು.

ವರುಣಾದಲ್ಲಿ ಅಪ್ಪ ನಿಂತರೇ ಅವರ ಪರವಾಗಿ ಕ್ಷೇತ್ರದ ಕೆಲಸ ಮಾಡಬೇಕಾಗುತ್ತದೆ.  ಕ್ಷೇತ್ರ ತ್ಯಾಗ ಅಂತಾ ಏನಿಲ್ಲ ಬೇರೆಯವರು ಬಿಟ್ಟು ಕೊಡುತ್ತಾರೆ. ಪಕ್ಷದ ಕಾರ್ಯಕರ್ತನಾಗಿ ಕ್ಷೇತ್ರ ಬಿಟ್ಟಿಕೊಡಲು ಸಿದ್ಧ ಎಂದರು.

Key words: Varana – constituency-Siddaramaiah-  MLA -Yatindra Siddaramaiah.