ವರುಣಾ, ಚಾಮರಾಜನಗರ ಎರಡೂ ಕಡೆ ವಿ.ಸೋಮಣ್ಣ ಗೆಲ್ಲಲ್ಲ- ಶಾಸಕ ಪುಟ್ಟರಂಗಶೆಟ್ಟಿ ..

0
1

ಚಾಮರಾಜನಗರ,ಏಪ್ರಿಲ್,12,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದ್ದು ಈ ಮಧ್ಯೆ ನಿನ್ನೆ ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಸಚಿವ ವಿ.ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಈ ಕುರುತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಚಾಮರಾಜನಗರ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರೂ ಕೂಡ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ.  ಸೋಮಣ್ಣ ಅಲ್ಲ ಯಾರೆ ಬಂದರೂ ಸ್ಪರ್ಧಿಸಲು ನಾನು ಸಿದ್ದನಿದ್ದೇನೆ. ವರುಣಾ ಚಾಮರಾಜನಗರ ಎರಡೂ ಕಡೆ ಸೋಮಣ್ಣ ಗೆಲ್ಲುವುದಿಲ್ಲ ಎಂಧು ಭವಿಷ್ಯ ನುಡಿದರು.

ರಾಜಕೀಯವಾಗಿ ಮುಗಿಸಲು ಸೋಮಣ್ಣ ಅವರನ್ನ ಎರಡು ಕ್ಷೇತ್ರಗಳಿಗೆ ಕಳಿಸಿರಬಹುದು ಎಂದು ಶಾಸಕ ಪುಟ್ಟರಂಗಶೆಟ್ಟಿ ಲೇವಡಿ ಮಾಡಿದರು.

Key words: V. Somanna -not -win –both- Varuna – Chamarajanagar- MLA Puttarangashetty