ಅಥಣಿಯಿಂದ ಟಿಕೆಟ್ ಮಿಸ್: ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಿರ್ಧಾರ.

ಬೆಳಗಾವಿ,ಏಪ್ರಿಲ್,12,2023(www.justkannada.in):  ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಿರ್ಧಾರ ಮಾಡಿದ್ದಾರೆ.

ಈ ಕುರಿತು ಇಂದು ಸುದ‍್ಧಿಗೋಷ್ಠಿ ನಡೆಸಿ ಬೇಸರ ಹೊರ ಹಾಕಿದ ಲಕ್ಷ್ಮಣ್ ಸವದಿ,  ಬಿಜೆಪಿ ಟಿಕೆಟ್ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ..? ಅಥಣಿ ಕ್ಷೇಥ್ರ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ಅವರೇ ನನ್ನ ಹೈಕಮಾಂಡ್ .  ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ನನಗೆ ಟಿಕೆಟ್ ನೀಡದ್ದು ನೋವು ತಂದಿದೆ ಬಿಜೆಪಿ ಪಕ್ಷ ಬೇರೆ ಹಾದಿಯಲ್ಲಿ ಹೋಗುತ್ತಿದೆ.  ಸೌಜನ್ಯಕ್ಕಾದರೂ ವರಿಷ್ಠರು ಚರ್ಚಿಸಲಿಲ್ಲ.  ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು.  ನನ್ನ ಜತೆ ಅನೇಕರು ಹಲವು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ನಾನು ಪಕ್ಷ ಸಂಘಟನೆ ಮಾಡದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

Key words: Miss- ticket – Athani: Former DCM- Laxman Savadi- resign -BJP.