Sunday, August 23, 2026

BDA Apartments

Home Front Page ದಸರಾ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ : ಮಾಜಿ ಸಂಸದ ಆರ್.ಧೃವನಾರಾಯಣ್

ದಸರಾ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ : ಮಾಜಿ ಸಂಸದ ಆರ್.ಧೃವನಾರಾಯಣ್

ಮೈಸೂರು,ಸೆಪ್ಟೆಂಬರ್,26,2020(www.justkannada.in) : ದಸರಾ ಮಹೋತ್ಸವಕ್ಕೆ ನೀಡುವ 15 ಕೋಟಿ ರೂ. ಹಣವನ್ನು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಒತ್ತಾಯಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಈ ಬಾರಿ ದಸರಾ ಮಹೋತ್ಸವ ಮಾಡದಿದ್ದರೂ ಪರವಾಗಿಲ್ಲ. ಮಾಡಿದರೆ ಅದು ರಾಜಮನೆತನಕ್ಕೆ ಮಾತ್ರ ಸೀಮಿತವಾಗಲಿ. ರಾಜಮನೆತನದವರು ಪೂಜೆ ಮಾಡಿಕೊಂಡರೂ ತೊಂದರೆಯಿಲ್ಲ ಎಂದಿದ್ದಾರೆ.

Use-Dasara-grant-control-corona-Former MP R. Dhruvanarayan

ಕೊರೊನಾ ಸೋಂಕಿತರಿರುವ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ ನಿವಾರಿಸಲು ಆದ್ಯತೆ ಮೇರೆಗೆ ದಸರಾ ಅನುದಾನವನ್ನು ಬಳಸಿಕೊಳ್ಳಬೇಕು. ದಸರಾ ಆನೆಗಳ ಮಾವುತರು ಕಾವಾಡಿಗಳ ಆರೋಗ್ಯ ಅತಿ ಮುಖ್ಯವಾಗಿದ್ದು, ಈ‌ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

key words : Use-Dasara-grant-control-corona-Former MP R. Dhruvanarayan