“ಅಮೇರಿಕಾ ಸರ್ಜನ್ ಜನರಲ್ ಡಾ. ಮೂರ್ತಿ ಕುಟುಂಬದ ಸಹಾಯ ಶ್ಲಾಘನೀಯ” – ಎಚ್ ಎ ವೆಂಕಟೇಶ್

ಮೈಸೂರು,ಜೂ,1,2021(www.justkannada.in): ಅಮೇರಿಕಾ ಸರ್ಜನ್ ಜನರಲ್ ಆಗಿದ್ದರೂ ಸಜ್ಜನಿಕೆ ಮರೆಯದ ದೊಡ್ಡಗುಣ ಡಾ. ವಿವೇಕ ಮೂರ್ತಿ ಮತ್ತು ಅವರ ತಂದೆ ಡಾ. ಎಚ್ ಎನ್. ಲಕ್ಷ್ಮಿ ನರಸಿಂಹಮೂರ್ತಿ ಅವರದು ಎಂದು ಮೈಸೂರು ಪೇಂಟ್ಸ್ & ವಾರ್ನಿಷ್ ಮಾಜಿ ಅಧ್ಯಕ್ಷ ಹೆಚ್.ಎ ವೆಂಕಟೇಶ್ ಗುಣಗಾನ ಮಾಡಿದ್ದಾರೆ.jk

ಡಾ. ವಿವೇಕಮೂರ್ತಿ ಮತ್ತು ಅವರ ತಂದೆ ಡಾ. ಎಚ್ ಎನ್. ಲಕ್ಷ್ಮಿ ನರಸಿಂಹಮೂರ್ತಿ ಅವರ ಕುರಿತು ಮೆಚ್ಚುಗೆ ಮಾತುಗಳನ್ನಾಡಿರುವ ಹೆಚ್.ಎ ವೆಂಕಟೇಶ್ , ಇವರು ನನ್ನ ಹುಟ್ಟೂರು ಎಂದು ಹೇಳಿಕೊಳ್ಳಲು ನನಗೆ ಅಭಿಮಾನ. ಇದಕ್ಕೆ ಕಾರಣ ಅವರ ನಿರಂತರ ಸೇವಾ ಮನೋಭಾವನೆ. ಈ ಕುಟುಂಬ 2006ರಿಂದಲೂ ಹತ್ತಾರು ಯೋಜನೆಗಳು ಮೂಲಕ ವಿದ್ಯಾರ್ಥಿಗಳಿಗೆ, ಯುವಕರಿಗೆ ಅವರ ಕಲಿಕೆಗೆ, ಬದುಕಿಗೆ ನೆರವಾಗಿದ್ದಾರೆ, ನೆರವಾಗುತ್ತಲೆ ಇದ್ದಾರೆ. ಕಂಪ್ಯೂಟರ್ ಉಪಕರಣಗಳು, ಕಲಿಕಾ ಸಾಮಗ್ರಿಗಳ ನೆರವಿನ ಜೊತೆಗೆ ಆರೋಗ್ಯ ತಪಾಸಣಾ ಶಿಬಿರಗಳು, ಉಚಿತ ಶಸ್ತ್ರಚಿಕಿತ್ಸೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇಂತಹ ಉದಾರಿಗಳು ಇದೀಗ ದೇಶವನ್ನೇ ತಲ್ಲಣಗೊಳಿಸಿರುವ  ಸಂಕಷ್ಟಕ್ಕೆ ನೆರವು ನೀಡಿರುವುದು ಅವರ ಹೃದಯ ವೈಶಾಲ್ಯವನ್ನು ಪರಿಚಯಿಸಿದೆ ಎಂದು ಶ್ಲಾಘಿಸಿದ್ದಾರೆ.

ಸಮಾಜ ಸುಧಾರಣಾ ಕಾರ್ಯಕ್ರಮಗಳಿಗೆ ಅವರೇ ಸಂಸ್ಥಾಪನೆ ಮಾಡಿರುವ ಸ್ಕೋಪ್(ಸೊಸೈಟಿ ಆಫ್ ಚಿಲ್ಡ್ರನ್ ಆಫ್ ಪ್ಲಾನೆಟ್ ಅರ್ಥ್) ಸಂಸ್ಥೆಯ ಮೂಲಕ ಕೊರೊನಾದಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಾ, ಆರೋಗ್ಯ ರಕ್ಷಣೆಗೂ ದಿಕ್ಕು ಕಾಣದಂತೆ ಚಿಂತಿಸುವ ಹೊತ್ತಿನಲ್ಲಿ, ಮಂಡ್ಯ ಮತ್ತು ಮಡಿಕೇರಿ ಜನರ ಆರೋಗ್ಯ ಸುಧಾರಣೆಗೆ 1.40 ಕೋಟಿ ರೂಪಾಯಿಗಳಷ್ಟು ಆರೋಗ್ಯ ಉಪಕರಣಗಳ ಸಹಾಯ ಹಸ್ತ ನೀಡಿದ್ದಾರೆ. ಆ ಮೂಲಕ ಸಾವಿರಾರು ಜನರ ಆಶಾಕಿರಣರಾಗಿದ್ದಾರೆ. ದೇಶಗಳ ಅಂತರವಿದ್ದರೂ ನಿಮ್ಮ ಕಾಳಜಿ ಎಲ್ಲಾ ಹುಟ್ಟಿದ ಊರೇ ಆಗಿರುವುದಕ್ಕೆ ಚಿರಋಣಿಯಾಗಿದ್ದೇವೆ ಎಂದಿದ್ದಾರೆ ಎಚ್ ಎ ವೆಂಕಟೇಶ್.

Key words: US –Surgeon- General -Murthy family’s- help – kpcc-spokspoerson- H A Venkatesh-Appreciation