ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಲು ಸಮ್ಮತಿಸಿವೆ- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನವದೆಹಲಿ,ಮೇ,10,2025 (www.justkannada.in):  ಭಾರತ-ಪಾಕಿಸ್ತಾನ ಎರಡು ದೇಶಗಳು ಈ ಕ್ಷಣದಿಂದಲೇ ಕದನ ವಿರಾಮ ಘೋಷಿಸಲು ಸಮ್ಮತಿಸಿವೆ ಎಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಬಗ್ಗೆ ವರದಿಯಾಗಿದೆ.  ಭಾರತ -ಪಾಕ್ ಕದಮ ವಿರಾಮ ಘೋಷಿಸಲು  ಒಪ್ಪಿಗೆ ನೀಡಿವೆ. ರಾತ್ರಿಯಿಡಿ ಮಾತುಕತೆಯಿಂದ ಅಮೆರಿಕಾ ಮಧ್ಯಸ್ಥಿಕೆಯಿಂದಲೇ ಕದನ ವಿರಾಮ ಘೋಷಣೆಗೆ ಒಪ್ಪಿಗೆ  ನೀಡಿವೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಹಾಗೆಯೇ ತಟಸ್ಥ ಸ್ಥಳದಲ್ಲಿ ಎರಡು ದೇಶಗಳ ನಡುವೆ ಮಾತುಕತೆ ಎಂದ ಟ್ರಂಪ್  ತಿಳಿಸಿದ್ದಾರೆ.

Key words: India, Pakistan, declare, ceasefire, US President, Donald Trump