Sunday, September 20, 2026

BDA Apartments

UPSC: ಅರ್ಜಿ ಸಲ್ಲಿಕೆಗೆ ದಾಖಲೆ ಕಡ್ಡಾಯ BDA JK_Adv BDA Adv
Home Front Page UPSC: ಅರ್ಜಿ ಸಲ್ಲಿಕೆಗೆ ದಾಖಲೆ ಕಡ್ಡಾಯ

UPSC: ಅರ್ಜಿ ಸಲ್ಲಿಕೆಗೆ ದಾಖಲೆ ಕಡ್ಡಾಯ

ನವದೆಹಲಿ,ಜನವರಿ,25,2025 (www.justkannada.in): ಅಭ್ಯರ್ಥಿಗಳು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ವಯಸ್ಸು ದೃಢಪಡಿಸುವ ಮತ್ತು ಮೀಸಲಾತಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. UPSC nypunya1

ಇದಕ್ಕೂ ಮೊದಲು  ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ ಲೋಡ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಈ ಮಧ್ಯೆ ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ನಕಲಿ ದಾಖಲೆಗಳನ್ನು ನೀಡಿದ್ದ ಆರೋಪ ಈಚೆಗೆ ಕೇಳಿಬಂದಿದ್ದು,  ಇದರ ಬೆನ್ನಲ್ಲೇ ಇದೀಗ  ಕೇಂದ್ರ ಸರ್ಕಾರ ನಿಯಮಗಳಲ್ಲಿ ಬದಲಾವಣೆ ತಂದಿದೆ.

ಅಭ್ಯರ್ಥಿಗಳು ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವೇಳೆ ವಯಸ್ಸು ದೃಢಪಡಿಸುವ ಮತ್ತು ಮೀಸಲಾತಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ತಿಳಿಸಿದೆ.  ಆನ್‌ ಲೈನ್ ಅರ್ಜಿ ನಮೂನೆಯೊಂದಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ವಿಫಲ ‘ವಾದರೆ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಜನವರಿ 22ರಂದು ಹೊರಡಿಸಿರುವ ‘ನಾಗರಿಕ ಸೇವಾ ಪರೀಕ್ಷೆಗಳ ನಿಯಮ- 2025’ರಲ್ಲಿ ತಿಳಿಸಲಾಗಿದೆ.

ಕೇಂದ್ರ ಲೋಕಸೇವಾ ಆಯೋಗವು ಈ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ್ದು, ಪೂರ್ವಭಾವಿ ಪರೀಕ್ಷೆಯು ಮೇ 25ರಂದು ನಡೆಯಲಿದೆ. ಐಎಎಸ್, ಐಎಫ್‌ಎಸ್ ಮತ್ತು ಐಪಿಎಸ್ ಸೇರಿದಂತೆ ಒಟ್ಟು 979 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು http:// upsconline.gov.in ವೆಬ್‌ಸೈಟ್ ಮೂಲಕ ಫೆಬ್ರುವರಿ 11, 2025ರ ಸಂಜೆ  6 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Key words: Documents, mandatory,  filing, application, UPSC, Exam