ಬೆಂಗಳೂರು,ಫೆಬ್ರವರಿ,5,2026 (www.justkannada.in): ಬಿಎಂಟಿಸಿ ಬಸ್ ಗಳಲ್ಲಿ ಕೆಲ ಕಂಡಕ್ಟರ್ ಗಳು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ ಗಳನ್ನು ನೀಡಿ, ತಮ್ಮ ಬ್ಯಾಂಕ್ ಅಕೌಂಟ್ ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಂಡಿರುವುದು ಬೆಳಕಿಗೆ ಬಂದು, ಈ ಸಂಬಂಧ ಕೆಲ ಕಂಡಕ್ಟರ್ ಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಇದೀಗ ಈ ಬೆನ್ನಲ್ಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇಂತಹದ್ದೆ ಯುಪಿಐ ಹಗರಣವೊಂದು ನಡೆದಿದೆ.
ಹೌದು ವಿಕ್ಟೋರಿಯಾ ಆಸ್ಪತ್ರೆಯ ಕೆಲ ಸಿಬ್ಬಂದಿ UPI ಮೂಲಕ 23 ಲಕ್ಷ ರೂಪಾಯಿ ದೋಚಿರುವುದು ಬಹಿರಂಗವಾಗಿದೆ. ಈ ಸಂಬಂಧ ಆಸ್ಪತ್ರೆಯ ಅಧೀಕ್ಷಕ ದೀಪಕ್ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೋಗಿಗಳ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನ್ ಗೆ ನೀಡಲಾಗಿದೆ. ಆದರೆ , ಆಸ್ಪತ್ರೆಯ ಕೆಲ ಸಿಬ್ಬಂದಿಗಳೂ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿ ತಮ್ಮ ಖಾತೆಗೆ ರೋಗಿಗಳ ಹಣ ಹಾಕಿಸಿಕೊಂಡಿದ್ದಾರೆ. ಲ್ಯಾಬ್, ಒಪಿಡಿ , ಎಕ್ಸ್ ರೇ ವಿಭಾಗದಲ್ಲಿ ವೈಯಕ್ತಿಕ QR ಸ್ಕ್ಯಾನರ್ ಅಳವಡಿಕೆ ಮಾಡಿಕೊಂಡು 23 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯುಪಿಐ ಸ್ಕ್ಯಾನರ್ ವಿಚಾರದಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ಅಧೀಕ್ಷಕ ದೀಪಕ್ ಅವರು ಸಮಿತಿ ರಚಿಸಿ ತನಿಖೆ ನಡೆಸಿದಾಗ 23 ಲಕ್ಷ ವಂಚನೆ ಬೆಳಕಿಗೆ ಬಂದಿದೆ, ಇದೀಗ ದೀಪಕ್ ಅವರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Key words: UPI scam, government hospital, Rs 23 lakh, fraud







