Tuesday, September 15, 2026

BDA Apartments

ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟ ಉಪ್ಪಿ ಹೊಸ ಸಿನಿಮಾ ಪೋಸ್ಟರ್ ! BDA JK_Adv BDA Adv
Home Cinema ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟ ಉಪ್ಪಿ ಹೊಸ ಸಿನಿಮಾ ಪೋಸ್ಟರ್ !

ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟ ಉಪ್ಪಿ ಹೊಸ ಸಿನಿಮಾ ಪೋಸ್ಟರ್ !

ಬೆಂಗಳೂರು, ಜೂನ್ 03, 2022 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಬಹುನಿರೀಕ್ಷಿತ “UI” ಚಿತ್ರದ ಹೊಸ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.

ಯೆಸ್. ಉಪ್ಪಿ ಮತ್ತೆ ಎಲ್ಲರ ತಲೆ ಸಖತ್‌ ಹುಳು ಬಿಟ್ಟಿದ್ದಾರೆ! ಅವರ ಸಿನಿಮಾದ ಪೋಸ್ಟರ್‌ ನೋಡಿದವರಿಗೆಲ್ಲ ಕುತೂಹಲ ಹೆಚ್ಚಾಗುತ್ತಲೇ ಇದೆ.

ಹಲವು ವರ್ಷಗಳಿಂದ ನಿರ್ದೇಶನದಿಂದ ದೂರ ಉಳಿದಿದ್ದ ಉಪ್ಪಿ. ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿದ್ದು, ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ.

ಈ ಬಾರಿಯೂ ತಮ್ಮ ಸಿನಿಮಾಕ್ಕೆ ಕೇವಲ ಒಂದು ಚಿಹ್ನೆಯನ್ನು ಹೆಸರಾಗಿ ಇಟ್ಟಿದ್ದಾರೆ. ಈ ಚಿತ್ರದ ಟೈಟಲ್‌ ಏನು ಎಂಬುದು ಜನರ ಆಲೋಚನೆಗೆ ಬಿಟ್ಟಿದ್ದಾರೆ.

ಈ ಚಿತ್ರದ ಹೊಸ ಪೋಸ್ಟರ್‌ ಇಂದು ರಿಲೀಸ್‌ ಆಗಿದೆ. ಇದು ನೋಡುಗರ ಮೆದುಳಿಗೆ ಕೈ ಹಾಕುವಂತಿದೆ!