ಯಾವ ಕಾರಣಕ್ಕೂ  2ನೇ ಅಭ್ಯರ್ಥಿ ವಾಪಸ್ ಪಡೆಯಲ್ಲ-  ವಿಪಕ್ಷ ನಾಯಕ ಸಿದ್ಧರಾಮಯ್ಯ ಸ್ಪಷ್ಟನೆ.

ಬೆಂಗಳೂರು,ಜೂನ್,3,2022(www.justkannada.in):  ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್​ನ 2ನೇ ಅಭ್ಯರ್ಥಿ ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ. ನಮಗೆ ಆತ್ಮಸಾಕ್ಷಿ ಮತಗಳಿವೆ. ಬೇರೆ ಪಕ್ಷದ ಕೆಲ ಶಾಸಕರು ಆತ್ಮಸಾಕ್ಷಿಯಿಂದ ನಮಗೆ ಮತ ಹಾಕುತ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಸುದ್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಹೈಕಮಾಂಡ್ ಸೂಚನೆಯಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ನಾವು ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಹಿಂಪಡೆಯಲ್ಲ. ನಮಗೆ ಬೇರೆ ಬೇರೆ ಮತಗಳು ಸಿಗಲಿದೆ. ಹೇಗೆ ಎಂದು ಹೇಳುವುದಿಲ್ಲ. ನಾವು ಗೆಲ್ಲುತ್ತೇವೆ ಎಂದು 2ನೇ ಅಭ್ಯರ್ಥಿ ಹಾಕಿದ್ದೇವೆ. ನಾವ್ಯಾಕೆ 2ನೇ ಅಭ್ಯರ್ಥಿ ವಾಪಸ್ ಪಡೆಯಬೇಕು ಎಂದು ಪ್ರಶ್ನಿಸಿದರು.

ನಾಮಪತ್ರ ಹಿಂಪಡೆಗೆ ಇಂದು ಕೊನೇ ದಿನ. ಡೆಡ್​ಲೈನ್ ಮುಗಿಯುವ ಮೊದಲೇ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.  ನಮ್ಮ ಅಭ್ಯರ್ಥಿ ಗೆಲ್ಲೋದು ನಿಶ್ಚಿತ. ಯಾರ ಬಳಿಯೂ ಪೂರ್ಣ ಸಂಖ್ಯಾಬಲ ಇಲ್ಲ. ನಮಗೆ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.

Key words: 2nd candidate -does not -return.-Siddaramaiah-clarified.