ಬುದ್ಧಿವಂತ -2 ಪೋಸ್ಟರ್ ರಿಲೀಸ್: ಉಪ್ಪಿ ಫ್ಯಾನ್ಸ್’ಗೆ ಸಪ್ರೈಸ್!

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಬಹಳ ದಿನಗಳ ನಂತರ ರಿಯಲ್​ ಸ್ಟಾರ್​​ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಗಿಫ್ಟ್​ ನೀಡಿದ್ದಾರೆ.

ಬುದ್ಧಿವಂತ -2 ಚಿತ್ರದ ಮತ್ತೊಂದು ಪೋಸ್ಟರ್​ ರಿಲೀಸ್​ ಮಾಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು ಉಪೆಂದ್ರ ಡ್ಯುಯಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಪ್ಪಿ ಎದುರಾಗಿ ಆದಿತ್ಯ ಮೊದಲ ಬಾರಿಗೆ ಖಳನಾಟನಾಗಿ ಕಾಣಿಸಿಕೊಂಡಿದ್ದಾರೆ. ಬುದ್ಧಿವಂತ 2 ನಲ್ಲಿ ಮೇಘನಾ ರಾಜ್ ಮತ್ತು ಸೋನಾಲ್ ಮೋಂಟಾರಿಯೋ ಉಪ್ಪಿಗೆ ಜೋಡಿಯಾಗಿದ್ದಾರೆ.