ದುಬೈನಲ್ಲಿ ಮಹಿ ಜತೆ ರಿಷಬ್ ಪಂತ್ ಪಾರ್ಟಿ !

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​ ರಿಶಬ್ ಪಂತ್, ದುಬೈನಲ್ಲಿ ಬಿಂದಾಸ್ ಕಾಲ ಕಳೆದಿದ್ದಾರೆ.

ವಿಂಡಿಸ್ ವಿರುದ್ಧದ ಏಕದಿನ ಸರಣಿ ಗೆಲುವಿನ ನಂತರ ದುಬೈಗೆ ತೆರಳಿದ ಪಂತ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಮಸ್ತ್ ಪಾರ್ಟಿ ಮಾಡ್ತಿದ್ದಾರೆ.

ಧೋನಿ ಮತ್ತು ಇತರೆ ಗೆಳೆಯರ ಜೊತೆ ಕಾಲ ಕಳೆಯುತ್ತಿರುವ ಪಂತ್, ಬಿಡುವಿನ ವೇಳೆ ಆಫ್ ದಿ ಫೀಲ್ಡ್​ನಲ್ಲಿ ಸಖತ್​ ಆಗೇ ಟೈಮ್ ಪಾಸ್ ಮಾಡ್ತಿದ್ದಾರೆ. ಆಫ್ ದಿ ಫೀಲ್ಡ್​ನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುವ ಪಂತ್, ಆನ್​ ಫೀಲ್ಡ್​ನಲ್ಲಿ ಒತ್ತಡದಲ್ಲೇ ವೈಫಲ್ಯ ಅನುಭವಿಸುತ್ತಿದ್ದಾರೆ.