ಅಂತರಶಿಸ್ತೀಯ ಅಧ್ಯಯನ ಇಂದಿನ ತುರ್ತು ಹಾಗೂ ಭವಿಷ್ಯದ ಹಾದಿ :  ಪ್ರೊ.ಗೋವರ್ಧನ್‌ ಮೆಹ್ತಾ

It is crucial today that research in various fields in the domain of science should yield results at the expected level, hence there is a pressing need to emphasize 'interdisciplinary studies'. The fact that a 'common language' to connect various fields has not yet been developed is a setback. Efforts should continue in this regard. Only then meaningful research will be possible.

 

ಮೈಸೂರು, ಮೇ.೨೮.೨೦೨೫: ವಿಜ್ಞಾನ ಕ್ಷೇತ್ರದಲ್ಲಿ ಅಂತರಶಿಸ್ತೀಯ ಅಧ್ಯಯನ ಹೆಚ್ಚಾಗಬೇಕು. ಇದು ಇಂದಿನ ತುರ್ತು ಹಾಗೂ ಭವಿಷ್ಯದ ಹಾದಿ ಎಂದು ಭಾರತೀಯ ವಿಜ್ಞಾನ ಭವನದ ಮಾಜಿ ನಿರ್ದೇಶಕ ಹಾಗೂ ಹೆಸರಾಂತ ವಿಜ್ಞಾನಿ ಪ್ರೊ.ಗೋವರ್ಧನ್‌ ಮೆಹ್ತಾ ಅಭಿಪ್ರಾಯಪಟ್ಟರು.

ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.‌ ರಂಗಪ್ಪ ಅವರ ೭೦ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೈಸೂರು ವಿವಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ “ ಮಾಲಿಕ್ಯೂಲರ್‌ ಮೆಡಿಸಿನ್‌ ಹೊಸ ಸವಾಲುಗಳು ಹಾಗೂ ನಾವಿನ್ಯತೆಗಳು “ ಕುರಿತಾದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

vtu

ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿನ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ನೀಡಬೇಕಾದರೆ “ಅಂತರಶಿಸ್ತೀಯ ಅಧ್ಯಾಯನಕ್ಕೆ” ಹೆಚ್ಚಿನ ಒತ್ತು ನೀಡಬೇಕಾಗಿರುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳನ್ನು ಬೆಸೆಯುವ “ಸಂಹವನ ಭಾಷೆ” ಈ ತನಕ  ಸಿದ್ಧವಾಗದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಆಗ ಮಾತ್ರ  ಅರ್ಥಪೂರ್ಣಸಂಶೋಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯಾವುದೇ ಸಂಶೋಧನೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಅದಕ್ಕೆ ಸಹಭಾಗಿತ್ವದಾರರು ಅವಶ್ಯಕ. ಈ ನಿಟ್ಟಿನಲ್ಲಿ ಪ್ರೊ. ಕೆ.ಎಸ್.ರಂಗಪ್ಪ ಅವರು ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಅವರ ಜತೆಗಿರುವ ಕೋಲಾಬ್ರೇಟರ್ಸ್‌ ಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಅದು ವಿಜ್ಞಾನ ಕ್ಷೇತ್ರದಲ್ಲಿ ಗಿನ್ನಿಸ್‌ ದಾಖಲೆಯೇ ಆಗುತ್ತದೆ. ಇದಕ್ಕೆ ಕಾರಣ ಪ್ರೊ. ರಂಗಪ್ಪ ಅವರ ಜನಪ್ರಿಯತೆ ಜತೆಗೆ ಸಹಭಾಗಿತ್ವದಾರರನ್ನು ಸಂಪರ್ಕಿಸುವ ಅವರ ವಿಶೇಷ ಗುಣ ಎಂದು ಪ್ರೊ. ಮೆಹ್ತಾ ಮೆಚ್ಚುಗೆ ವ್ಯಕ್ತಪಡಿಸಿದರು.

ನವ ದೆಹಲಿಯ ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನ ಸಂಶೋಧನಾ ಪ್ರಾಧ್ಯಾಪಕ ಪ್ರೊ.ಟಿ.ಪಿ.ಸಿಂಗ್‌ ಮಾತನಾಡಿ, “ ಡ್ರಗ್‌ ಡಿಸ್ಕವರಿ” ಕ್ಷೇತ್ರದಲ್ಲಿ ಪ್ರೊ. ಕೆ.ಎಸ್.‌ ರಂಗಪ್ಪ ಅವರ ಸಂಶೋಧನಾ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮೈಸೂರು ವಿವಿಯ ಜತೆಗೆ ಒಡನಾಟ ಹೊಂದಲು ಕಾರಣವಾದ ಸಂಗತಿ ವಿವರಿಸಿದರು. ಈ ಅವಕಾಶ ಕಲ್ಪಿಸಿದ ಪ್ರೊ. ರಂಗಪ್ಪ ಅವರಿಗೆ ಧನ್ಯವಾದ ಹೇಳಿದ ಪ್ರೊ.ಸಿಂಗ್‌, ಕಳೆದ ಎರಡು ದಶಕಗಳಿಂದಲೂ ಮೈಸೂರು ವಿವಿ ಜತೆಗಿನ ಒಡನಾಟ ಮುಂದುವರೆದ ಬಗ್ಗೆ ಸಂತಸ ವ್ಯಕ್ತಪಡಿಸಿ, ಮೈಸೂರು ವಿವಿ ದೇಶದಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಎಂದು ವಿಜ್ಞಾನ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರೊ. ಕೆ.ಎಸ್.‌ ರಂಗಪ್ಪ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು.ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮುಗಿಸಿಕೊಂಡು ಭಾರತಕ್ಕೆ ಬಂದ ಆರಂಭದಲ್ಲಿ ಪ್ರೊ. ಮೆಹ್ತಾ ಅವರು ನೀಡಿದ ಸಹಕಾರ ಸ್ಮರಿಸಿದರು. ಅಂದು ಸಂಶೋಧನೆಗೆ ಅವರು ನೀಡಿದ ೫ ಲಕ್ಷ ರೂ.ಗಳಿಂದ ಆರಂಭಗೊಂಡ ಸಂಶೋಧನೆ ಇಂದು ಕೋಟಿಗಟ್ಟಲೆ ಬೆಲೆ ಬಾಳುವ ಫಲಿತಾಂಶ ನೀಡಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಪ್ರೊ. ಗೋವರ್ಧನ್‌ ಮೆಹ್ತಾ, ಪ್ರೊ.ಟಿ.ಪಿ.ಸಿಂಗ್‌ ಅವರಂಥ ವಿಜ್ಞಾನಿಗಳ ಒಡನಾಟ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರ ಮಾರ್ಗದರ್ಶನ ಹಾಗೂ ಸಹಕಾರವೇ ನನ್ನ ಈ ಸಾಧನೆಗೆ ಪ್ರೇರಣೆ ಎಂದರು.

ವಿಚಾರ ಸಂಕಿರಣ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸಿಡಿಆರ್‌ ಐ ನ ಮಾಜಿ ನಿರ್ದೇಶಕ ಪ್ರೊ. ತಪಸ್‌ ಕುಮಾರ್‌ ಕುಂದು, ಸನ್‌ ಫಾರ್ಮಾ ರಿಸರ್ಚ್‌ ಕಂಪನಿಯ ನಿರ್ದೇಶಕ ಡಾ.ಟಿ.ರಾಜಾಮನ್ನಾರ್‌ ಭಾಗವಹಿಸಿದ್ದರು.  ಪ್ರೊ. ನಾಗಣ್ಣ ಕಾರ್ಯಕ್ರಮ ನಿರೂಪಿಸಿದರು.

key words: Interdisciplinary studies, today’s urgent, future pathway, Prof. Govardhan Mehta, UOM, Mysore, Rangappa.K.S.

SUMMARY:

Interdisciplinary studies – today’s urgent and future pathway: Prof. Govardhan Mehta.

It is crucial today that research in various fields in the domain of science should yield results at the expected level, hence there is a pressing need to emphasize ‘interdisciplinary studies’. The fact that a ‘common language’ to connect various fields has not yet been developed is a setback. Efforts should continue in this regard. Only then meaningful research will be possible.

vtu