ರಾಜ್ಯ ಸರ್ಕಾರದಿಂದ ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟ: ಸೆ.30ರವರೆಗೆ ಶಾಲಾ-ಕಾಲೇಜು ಬಂದ್…..

ಬೆಂಗಳೂರು,ಆಗಸ್ಟ್,31,2020(www.justkannada.in):  ಕೊರೋನಾ ಅಟ್ಟಹಾಸದ ನಡುವೆ ರಾಜ್ಯ ಸರ್ಕಾರ  ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದು, ಸೆಪ್ಟಂಬರ್ 30ರವರೆಗೂ ಶಾಲಾ ಕಾಲೇಜುಗಳನ್ನ ತೆರಯದಿರಲು ನಿರ್ಧಾರ ಮಾಡಲಾಗಿದೆ.jk-logo-justkannada-logo

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟೆಂಬರ್ 30ರವರೆಗೂ ಶಾಲಾ-ಕಾಲೇಜು ಆರಂಭ ಇರುವುದಿಲ್ಲ. ಆನ್ ಲೈನ್ ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

ಹಾಗೆಯೇ ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಗೆ ಅನುಮತಿ ನೀಡಿಲ್ಲ. ಮಲ್ಟಿಫ್ಲೆಕ್ಸ್, ಮನರಂಜನಾ ಪಾರ್ಕ್ ಗಳು ಕೂಡ ಬಂದ್ ಆಗಿರಲಿವೆ. ಸೆಪ್ಟೆಂಬರ್ 30ರವರೆಗೆ ಯಾವುದು ತೆರೆಯದಂತೆ ಮಾರ್ಗಸೂಚಿಯಲ್ಲಿ ನಿರ್ಬಂಧ  ಹೇರಲಾಗಿದೆ.

Key words: Unlock 4.0 -Guideline – State Government- School –no open