ಮೈಸೂರು ದಸರಾ, ಪಂಚಲಿಂಗ ದರ್ಶನ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ…

ಮೈಸೂರು, ಆಗಸ್ಟ್, 31,2020(www.justkannada.in) ; ನಾಡಹಬ್ಬ ದಸರಾ ಮಹೋತ್ಸವ ಹಾಗೂ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಕಾರ್ಯಕ್ರಮ ನಡೆಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

jk-logo-justkannada-logo

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು  ನಾಡಹಬ್ಬ ದಸರಾ ಮಹೋತ್ಸವ ಹಾಗೂ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಕಾರ್ಯಕ್ರಮ ನಡೆಸುವಂತೆ ಆಗ್ರಹಿಸಿದರು.

Dasara-Panchalinga darshan-Lighting and loudspeaker-Insistence-owner

ಸಂಘದ ಅಧ್ಯಕ್ಷ ಎಂ.ಜಯಶಂಕರ್ ಸ್ವಾಮಿ ಮಾತನಾಡಿ, ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಸುಮಾರು 2500 ಕುಟುಂಬಗಳಿಗಿಂತ ಹೆಚ್ಚು ದೀಪಾಲಂಕಾರ ಹಾಗೂ ಧ್ವನಿವರ್ಧಕ ವ್ಯವಸ್ಥೆಯ ವೃತ್ತಿಯನ್ನು ಮಾಡುತ್ತಿದ್ದಾರೆ. ಕಳೆದ 6 ತಿಂಗಳಿನಿಂದ ಕೂರೂನಾ ಹಿನ್ನೆಲೆಯಲ್ಲಿ ಲಾಕ್ ಡಾನ್ ಬಂದ್ ಆದಾಗಿನಿಂದ ನಮಗೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ಇಲ್ಲದಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆ ಸಮಾರಂಭಗಳು ಶುಭ ಕಾರ್ಯಗಳು ಇಲ್ಲದೆ ತೀವ್ರ ಸಂಕಷ್ಟದಲ್ಲಿದ್ದು, ಆರ್ಥಿಕವಾಗಿ ಕುಗ್ಗಿ ಹೋಗಿದ್ದೇವೆ. ಬ್ಯಾಂಕ್  ಹಾಗೂ ಇತರೆ ಪಡೆದಿರುವ ಸಾಲವನ್ನು ಕಟ್ಟಲಾಗದ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದೇವೆ. ನಮಗೆ ಈವರೆಗೂ ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸಹಾಯ ಸಹಕಾರ ನೀಡಿರುವುದಿಲ್ಲ  ಎಂದು ಕಿಡಿಕಾರಿದರು.

ಸರಕಾರದಿಂದ ಸಹಾಯಕ್ಕಾಗಿ ಮನವಿ

ಎಲ್ಲ ವರ್ಗದವರಿಗೂ ಸರ್ಕಾರದಿಂದ ಸಹಾಯ ಸಿಕ್ಕಿದೆ. ಆದರೆ ನಮ್ಮ ವೃತ್ತಿಯವರು ಏನು ಪಾಪ ಮಾಡಿದ್ದರು ಗೊತ್ತಿಲ್ಲ. ಈ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ ಸರ್ಕಾರ ಈಗಲಾದರೂ ಇತ್ತ ಗಮನ ಹರಿಸಿ  ಈ ಕೂಡಲೇ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕ ಕೆಲಸಗಾರರಿಗೆ ಸರ್ಕಾರದಿಂದ ಸಹಾಯ ನೀಡಬೇಕೆಂದು ಮನವಿ ಮಾಡಿದರು.

ವೃತ್ತಿಯನ್ನೇ ನಂಬಿರುವ ಸಾವಿರಾರು ಕೆಲಸಗಾರರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ.ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ ಆದ ಕಾರಣ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಸಭೆ ಸಮಾರಂಭ ಹಾಗೂ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಹಾಗೂ ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಕಾರ್ಯಕ್ರಮವನ್ನು ನಡೆಸಿ ಜೀವನಕ್ಕೆ ದಾರಿ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರ್, ಭೈರಪ್ಪ ,ಪ್ರಧಾನ ಕಾರ್ಯದರ್ಶಿ ನಾಗೇಶ್  ಪ್ರಸಾದ್ ಖಜಾಂಜಿ ಅನ್ವರ್,ಪ್ರಸಾದ್, ಪ್ರಕಾಶ್, ಆನಂದ್, ಚಂದ್ರು  ಇತರರು ಭಾಗವಹಿಸಿದ್ದರು.

key words ; Dasara-Panchalinga darshan-Lighting and loudspeaker-Insistence-owner