Wednesday, August 19, 2026

BDA Apartments

Home Front Page ರಾಜ್ಯ ‘ಕೈ’ ನಾಯಕರು ಹೈಕಮಾಂಡ್ ಕೈಗೊಂಬೆ- ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

ರಾಜ್ಯ ‘ಕೈ’ ನಾಯಕರು ಹೈಕಮಾಂಡ್ ಕೈಗೊಂಬೆ- ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

ಹಾಸನ,ಜೂನ್,21,2025 (www.justkannada.in): ರಾಜ್ಯ  ಕಾಂಗ್ರೆಸ್ ನಾಯಕರು ಹೈಕಮಾಂಡ್ ಕೈಗೊಂಬೆಯಾಗಿದ್ದಾರೆ. ರಾಹುಲ್ ಗಾಂಧಿ ಹೇಳಿದ ಬಳಿಕ ಜಾತಿ ಗಣತಿ ಮರು ಸರ್ವೇಗೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.

ಹಾಸನದ ಹಳೇಬೀಡಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಜಾತಿಗಣತಿ ವರದಿ ಮೊದಲೇ ತಿರಸ್ಕಾರ ಮಾಡಿ ಎಂದು ಹೇಳಿದ್ದೆ.  ರಾಹುಲ್  ಗಾಂಧಿ ಹೇಳಿದ ಬಳಿಕ ಮರು ಸರ್ವೇಗೆ ಮುಂದಾಗಿದ್ದಾರೆ.  ಈ ಮೂಲಕ ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದಾರೆ. ಸಿಎಂ ಹಾಗೂ ಸಚಿವರಿಗೆ ನಾನು ಉಳಿದರೆ ಸಾಕು ಎನ್ನುವಂತಾಗಿದೆ ಇಲ್ಲಿಂದ ಹೋಗಿ ಬರುವುದರೊಳಗೆ ಮಾಜಿ ಆಗ್ತಿನೇನೋ ಎಂಬ ಭಯವಿದೆ ಎಂದು ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅನುಭವಿ ಎಂದು ಅಪಾರ ಗೌರವವಿತ್ತು. ಎಲ್ಲದಕ್ಕೂ ಕೊಡಲಿ ಪೆಟ್ಟು ಕೊಡ್ತಾ ಇದ್ದೀರಿ. ಸಿದ್ದರಾಮಯ್ಯನವರೇ ಸಾಯುವವರೆಗೂ ಸಿಎಂ ಆಗಿರಲು ಸಾಧ್ಯವಿಲ್ಲ.  ಇನ್ನು ಎಷ್ಟು ದಿನ ರಾಜ್ಯದ ಜನರನ್ನ ವಂಚಿಸುತ್ತೀರಿ. ಕೆಲ ಬಾಲಗೊಂಚಿಗಳಿಗೆ ಕಡಿವಾಣ ಹಾಕದಿದ್ರೆ ಉಳಿಯಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.vtu

Key words: State ,Congress, leaders,high command, puppets, Union Minister, V. Somanna.