Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Crime ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಕೇಸ್: FIR ದಾಖಲು.

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಕೇಸ್: FIR ದಾಖಲು.

ಮಂಡ್ಯ,ಜೂನ್,21,2025 (www.justkannada.in): ಲೋನ್ ಕಟ್ಟುವುದು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ  ದಂಪತಿಯ ಮಗುವನ್ನ ಮೈಕ್ರೋ ಫೈನಾನ್ಸ್  ಸಿಬ್ಬಂದಿಗಳು ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಬೆಳಕವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ 2023, 137, 352 ರ ಅಡಿ ದೂರು ದಾಖಲಾಗಿದ್ದು  ಬಾಲಕಿ ತಂದೆ ನವೀನ್ ಕೊಟ್ಟ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.  ಟಿ.ನರಸೀಪುರದ ಬಜಾಜ್ ಮೈಕ್ರೋ ಫೈನಾನ್ಸ್ ನ ಅಜಿತ್ ಹಾಗೂ ಮ್ಯಾನೇಜರ್ ವಿರುದ್ದ ನವೀನ್  ದೂರು ಕೊಟ್ಟಿದ್ದರು.ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಬಾಲಕಿ ಅಪಹರಣ ಕೇಸ್: FIR ದಾಖಲು micro finance

ನವೀನ್ ತಾಯಿ ಮಂಗಳಮ್ಮ ಬಜಾಜ್ ಮೈಕ್ರೋ ಫೈನಾನ್ಸ್ ನಿಂದ 40 ಸಾವಿರ ಸಾಲ ಪಡೆದಿದ್ದರು. 24 ಕಂತುಗಳ ಪೈಕಿ 12 ಕಂತು ಕಟ್ಟಿದ್ದರು. ಆದರೆ ಈ ತಿಂಗಳ ಕಂತು ಕಟ್ಟಿಲ್ಲ ಎಂದು ನವೀನ್ ಗೆ ಸಿಬ್ಬಂದಿಗಳು ಕರೆ ಮಾಡಿದ್ದರು

ಈ ಮಧ್ಯೆ ಜೂನ್ 16 ರಂದು ಪೂರಿಗಾಲಿಯ ಸಂಬಂಧಿಕರ ಮನೆಗೆ ನವೀನ್ ದಂಪತಿ & ಮಕ್ಕಳು ತೆರಳಿದ್ದರು.  ನವೀನ್ ಮೈಸೂರಿಗೆ, ಪತ್ನಿ ಫ್ಯಾಕ್ಟರಿಗೆ ತೆರಳಿದ್ದ ವೇಳೆ  ಮೈಕ್ರೋ ಫೈನಾನ್ಸ್ ಸಿಬ್ಬಂದಿ ಆಗಮಿಸಿದ್ದು, ಬಾಲಕಿ ಮುಂದೆಯೇ ಸಿಬ್ಬಂಧಿ ಅಜಿತ್ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾನೆ.  ಅಲ್ಲದೇ ಬಾಲಕಿಯನ್ನ ಫ್ಯಾಕ್ಟರಿ ಬಳಿ ಕರೆದೊಯ್ದಿದ್ದು ಅಲ್ಲಿಯೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಾಲಕಿಯನ್ನು ವಾಪಸ್ಸು ಬಿಟ್ಟು ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಿರುಕುಳ ನೀಡುತ್ತಿರುವ ಫೈನಾನ್ಸ್ ಸಿಬ್ಬಂದಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ನವೀನ್  ದೂರು ನೀಡಿದ್ದರು.vtu

Key words: FIR, girl, kidnapping case, microfinance staff