Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಸಿದ‍್ಧರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ.

ಸಿದ‍್ಧರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ.

ಚಾಮರಾಜನಗರ, ಅಕ್ಟೋಬರ್,3,2023(www.justkannada.in): ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈದ್​ ಮಿಲಾದ್ ಹಬ್ಬದ ದಿನ ಬಿಟ್ಟು ಬೇರೆ ದಿನ ಆಚರಿಸಲು ಕಾರಣವೇನು? ಈದ್ ಮಿಲಾದ್​ ಅಂದರೆ ಒಂದು ದಿನ ಆಚರಿಸುವ ಹಬ್ಬ ಅಲ್ವಾ?  ದಂಗೆ ಎಬ್ಬಿಸಲೆಂದೇ ಒಂದು ದಿನ ಬಿಟ್ಟು ಆಚರಿಸಲಾಗಿದೆ. ಶಿವಮೊಗ್ಗ, ಕೋಲಾರದಲ್ಲಿ ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.ಸಿದ‍್ಧರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ-ಕೇಂ...

ಅತಿ ದೊಡ್ಡ ಖಡ್ಗದ ಮೆರವಣಿಗೆ ಮಾಡಲಾಗಿದೆ, ಇದರ ಅರ್ಥವೇನು? ಔರಂಗಜೇಬನ ದೊಡ್ಡ ಫೋಟೋ ಹಾಕಿ ಅಖಂಡ ಭಾರತವನ್ನ ಆಳಿದ ಮಹಾರಾಜ ಎಂಬ ಬರಹಗಳನ್ನ ಬರೆದಿದ್ದಾರೆ. ನಿಮ್ಮ ಆದರ್ಶಪುರುಷ ಮೊಹಮ್ಮದ್ ಪೈಂಗಬರ್ ಹಾಗೂ ಅಬ್ಧುಲ್ ಕಲಾಮ್ ಆಗಿರಬೇಕು ಎಂದು ಹೇಳಿದರು.

Key words: Union Minister- Shobha Karandlaje-accused -rioting – Shimoga-Siddhalaramaiah-Parameshwar