Sunday, August 2, 2026

BDA Apartments

Home Front Page ಕೇಂದ್ರ ಸಚಿವರ ಭೇಟಿ: ರಾಜ್ಯಕ್ಕೆ ಅಕ್ಕಿ ಪೂರೈಸುವ ಭರವಸೆ- ಸಚಿವ ಕೆ.ಎಚ್ ಮುನಿಯಪ್ಪ

ಕೇಂದ್ರ ಸಚಿವರ ಭೇಟಿ: ರಾಜ್ಯಕ್ಕೆ ಅಕ್ಕಿ ಪೂರೈಸುವ ಭರವಸೆ- ಸಚಿವ ಕೆ.ಎಚ್ ಮುನಿಯಪ್ಪ

ನವದೆಹಲಿ,ಆಗಸ್ಟ್,13,2024 (www.justkannada.in): ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಭೇಟಿಯಾಗಿದ್ದೆ. ರಾಜ್ಯಕ್ಕೆ ಬೇಕಿರುವ ಅಕ್ಕಿಯನ್ನ ಪೂರೈಸುವ ಭರವಸೆಯನ್ನ ನೀಡಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವರು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ಅಕ್ಕಿ ಖರೀದಿ ಕುರಿತು ಚರ್ಚಿಸಿದರು.

ಬಳಿಕ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್,  ರಾಜ್ಯಕ್ಕೆ  ಬೇಕಿರುವ ಅಕ್ಕಿ ಪೂರೈಸುವ ಭರವಸೆಯನ್ನ ಕೇಂದ್ರ ಸಚಿವರು ನೀಡಿದ್ದಾರೆ. ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ ತಿಂಗಳಿಗೆ 20 ಸಾವಿರ ಮೆಟ್ರಿಕ್  ಟನ್ ಅಕ್ಕಿ ಬೇಕು. ರಾಜ್ಯದ ಜನರು ಹಣಕ್ಕಿಂತ ಬೇಳೆ ಅಕ್ಕಿಗೆ ಮನವಿ ಮಾಡಿದ್ದಾರೆ. ಇದಲ್ಲೆವನ್ನೂ ನೋಡಿಕೊಂಡು ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದರು

Key words: Union Minister Prahlad Joshi, Minister, KH Muniappa