ಬೆಂಗಳೂರು,ಫೆಬ್ರವರಿ,7,2026 (www.justkannada.in): ಮೆಟ್ರೋ ಯೋಜನೆಗಳಿಗೆ ರಾಜ್ಯ ಸರ್ಕಾರವೇ ಹೆಚ್ಚು ಹಣ ಹಾಕುತ್ತೆ ಎನ್ನುವುದಾದರೇ ಕೇಂದ್ರ ಸರ್ಕಾರದ ಮೇಲೆ ಯಾಕೆ ಆರೋಪ ಮಾಡುತ್ತೀರಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರ ನಾವು ಸತ್ಯ ಹೇಳುತ್ತೇವೆ ಅಂತಾ ಸುಳ್ಳು ಹೇಳಿಕೆ ನೀಡುತ್ತಿದೆ ಮೆಟ್ರೊ ಯೋಜನೆಯಲ್ಲಿ ಕೇಂದ್ರದ ಪಾಲು 2% ಅಂತಿದೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚು ಹಣ ಹಾಕುತ್ತೆ ಅಂದ್ರೆ ಕೇಂದ್ರದ ಮೇಲೆ ಯಾಕೆ ಆರೋಪ ಮಾಡುತ್ತೀರಿ? ಮೆಟ್ರೋ ಪ್ರಯಾಣ ದರ ನಿಗದಿ ಮಾಡೋದು ಯಾರು? ಅವರಿಗೆ ಕೇಂದ್ರದ ಮೇಲೆ ಹಾಕುವ ಚಾಳಿ ಎಂದು ಗುಡುಗಿದರು.
ಸಿಎಂ ಕುರ್ಚಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಸಿಎಂ ಕುರ್ಚಿ ಕಿತ್ತಾಟ ಕಾಂಗ್ರೆಸ್ ಗೆ ಸೇರಿರೋದು ಅದಕ್ಕೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ. ನನಗೆ ನೂರೆಂಟು ಕೆಲಸಗಳಿವೆ ಎಂದರು.
Key words: Metro fare, hike, Union Minister, HDK







