ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಅನ್ನಿಸುತ್ತಿದೆ-ಕೇಂದ್ರ ಸಚಿವ HDK

ಚಿಕ್ಕಮಗಳೂರು,ಡಿಸೆಂಬರ್,22,2025 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ  ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಅನ್ನಿಸುತ್ತಿದೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುವ ನಿರೀಕ್ಷೆ ಇದೆ. ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಅನ್ನಿಸುತ್ತಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಮುಂದಿನ 3 ಬಜೆಟ್ ನ್ನು ನಾನೇ ಮಂಡಿಸುತ್ತೇನೆ  ಎಂದು ಹೇಳಿದ್ದಾರೆ. ಅವರೇ ಬಜೆಟ್ ಮಂಡಿಸಬಹುದು. ಡಿ.ಕೆ.ಶಿವಕುಮಾರ್ ದೇವರ ಜೊತೆ ಮಾತನಾಡಿದ್ದಾರಂತೆ. 45 ದಿನಗಳಲ್ಲಿ ಅವರ ಆಸೆ ಈಡೇರಿಸುತ್ತಾರೆ ಅಂತಾ ಹೇಳಿದ್ದಾರೆ. 45 ದಿನಗಳಲ್ಲಿ ಏನಾಗುತ್ತದೆಯೋ ಕಾದು ನೋಡೋಣ ಎಂದರು.

Key words: CM, Siddaramaiah, budget, Union Minister, HDK