ರಾಜ್ಯದ ಹಲವೆಡೆ ಗಲಾಟೆಗೆ ಕಾಂಗ್ರೆಸ್‌‍ ಕಾರಣ: ಸರ್ಕಾರದ ಪತನ ಶುರು- ಕೇಂದ್ರ ಸಚಿವ HDK  

ನವದೆಹಲಿ, ಸೆಪ್ಟಂಬರ್,8,2025 (www.justkannada.in): ರಾಜ್ಯದ ಹಲವೆಡೆ ಗಲಾಟೆಗೆ ಕಾಂಗ್ರೆಸ್‌‍ ಕಾರಣ. ಇದೀಗ ಕಾಂಗ್ರೆಸ್ ಸರ್ಕಾರದ ಪತನ ಶುರುವಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮದ್ದೂರಿನಲ್ಲಿ ಪ್ರತಿಭಟನೆ ನಡೆಯುತ್ತಿರುವುದನ್ನು ನೋಡಿದರೆ ಕಾಂಗ್ರೆಸ್‌‍ ಸರ್ಕಾರದ ಪತನ ಶುರುವಾಗಿದೆ. ಮಂಡ್ಯ ಗಲಾಟೆ ಸರ್ಕಾರ ಪತನಕ್ಕೆ ಕಾರಣವಾಗುತ್ತದೆ. ಕಾಂಗ್ರೆಸ್ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದರು.

ನಿನ್ನೆ ರಾತ್ರಿ ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ಕುರಿತಂತೆ ಮಂಡ್ಯ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಕಳೆದ ವರ್ಷವೂ ಕೂಡ ಇದೇ ರೀತಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿತ್ತು. ಮತ್ತೆ ಅಂತಹ ಘಟನೆ ಪುನರಾವರ್ತನೆಯಾಗಿದೆ. ಇದನ್ನು ಹಿಂಸೆಯ ಕಡೆಗೆ ತೆಗೆದುಕೊಂಡು ಹೋಗಬೇಡಿ ಎಂದು ಅವರು ಹೆಚ್ ಡಿಕೆ ಮನವಿ ಮಾಡಿದರು.

Key words: Congress,  government,Maddur, roit, Union Minister, HDK