Saturday, September 12, 2026

BDA Apartments

ಕೇಂದ್ರ ಸಚಿವ ಹರ್ಷವರ್ಧನ್ ಭೇಟಿಯಾಗಿ ಚರ್ಚೆ: ಮೈಸೂರು ದಸರಾಗೆ ಆಗಮಿಸುವಂತೆ ಆ...
Home Front Page ಕೇಂದ್ರ ಸಚಿವ ಹರ್ಷವರ್ಧನ್ ಭೇಟಿಯಾಗಿ ಚರ್ಚೆ: ಮೈಸೂರು ದಸರಾಗೆ ಆಗಮಿಸುವಂತೆ ಆಮಂತ್ರಣ ನೀಡಿದ ಸಚಿವ ಸಿ.ಟಿ...

ಕೇಂದ್ರ ಸಚಿವ ಹರ್ಷವರ್ಧನ್ ಭೇಟಿಯಾಗಿ ಚರ್ಚೆ: ಮೈಸೂರು ದಸರಾಗೆ ಆಗಮಿಸುವಂತೆ ಆಮಂತ್ರಣ ನೀಡಿದ ಸಚಿವ ಸಿ.ಟಿ ರವಿ…

ನವದೆಹಲಿ,ಸೆ,26,2019(www.justkannada.in): ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿಯಾಗಿ, ಚಿಕ್ಕಮಗಳೂರು ನಗರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾತಿ ಬಗ್ಗೆ ಚರ್ಚಿಸಿದರು.

ಸಚಿವ ಸಿ.ಟಿ ರವಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಈ ಬಗ್ಗೆ ಕ್ರಮವಹಿಸಿ ವೈದ್ಯಕೀಯ ಕಾಲೇಜು ಮಂಜೂರಾತಿಗೆ ಶೀಘ್ರದಲ್ಲೇ ಅನುಮತಿ ನೀಡಲಾಗುವುದು ಎಂದು‌ ಭರವಸೆ ನೀಡಿದರು.

ಈ ವೇಳೆ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಅವರು ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದರು.

Key words: Union Minister- Harshvardhan- meets- Minister –CT Ravi