ನನ್ನನ್ನು ಟೀಕಿಸುವ ಯೋಗ್ಯತೆ ಇದೆಯೇ..?- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ….

ಮಂಡ್ಯ,ಸೆ,26,2019(www.justkannada.in):  ನಾನು ಮಾಡಿದ್ದ ಸಾಲಮನ್ನಾ ಸರಿಯಾಗಿತ್ತು. ಹೆಚ್.ಡಿಕೆ ಮಾಡಿದ್ದ ಸಾಲಮನ್ನಾ ಸರಿಯಾಗಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನನ್ನನ್ನು ಟೀಕಿಸುವವರಿಗೆ ಯೋಗ್ಯತೆ ಇದ್ಯಾ? ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ  ಹೆಚ್.ಡಿ ಕುಮಾರಸ್ವಾಮಿ, ಪಾಪ ಸಿದ್ದರಾಮಯ್ಯ ಮೊನ್ನೆ ಎಲ್ಲೋ ಮಾತನಾಡಿದ್ದಾರೆ. ಅವರು ಮಾಡಿರುವ ರೈತರ ಸಾಲಮನ್ನಾ ಚೆನ್ನಾಗಿತ್ತಂತೆ. ನಾನು ಮಾಡಿದ ಸಾಲಮನ್ನಾ ಸರಿ ಇಲ್ಲವೆಂದು ಹೇಳಿದ್ದಾರೆ, ಏನೋ ಪಾಪ ಮಂಡ್ಯ ಜಿಲ್ಲೆ ಸ್ವಾಭಿಮಾನ ಉಳಿಸಿಬಿಟ್ಟರಂತೆ. ಸ್ವಾಭಿಮಾನ ಉಳಿಸಿ ಈಗ ಕಬ್ಬು ಮಾರಿಸಿಬಿಟ್ರೆ ಗೊತ್ತಾಗುತ್ತೆ’ ಎಂದು ಲೇವಡಿ ಮಾಡಿದರು.

ಕೆ.ಆರ್ ಪೇಟೆ ತಾಲೂಕಿನ 22000 ಕುಟುಂಬದ ಸಾಲಮನ್ನಾ ಮಾಡಲಾಗಿದೆ.  ಸಹಕಾರಿ, ರಾಷ್ಟ್ರೀಯ ಬ್ಯಾಂಕ್ ಸಾಲಮನ್ನಾ ಮಾಡಿದ್ದೇನೆ.  ಈ ಬಗ್ಗೆ 1 ಬುಕ್ ಮಾಡಿಸಿ ಪ್ರತಿ ಹಳ್ಳಿಗೂ ಕಳುಹಿಸುತ್ತೇನೆ. ನನ್ನ 14 ತಿಂಗ ಕೆಲಸಗಳ ಬಗ್ಗೆ ಹಳ್ಳಿ ಜನರಿಗೆ ತಿಳಿಸುತ್ತೇನೆ. ‘ವಿಶ್ವಾಸ ದ್ರೋಹ ಯಾರು ಮಾಡಿದ್ದಾರೆಂದು ಜನ ನಿರ್ಧರಿಸುತ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

Key words: criticize – Former CM -HD Kumaraswamy -mandya