ಬೆಳಗಾವಿ ಜೈಲಿನಲ್ಲಿರುವ ವ್ಯಕ್ತಿಯಿಂದ ಕೇಂದ್ರ ಸಚಿವ ಗಡ್ಕರಿಗೆ ಕೊಲೆ ಬೆದರಿಕೆ ಕರೆ

ಬೆಂಗಳೂರು, ಜನವರಿ 15, 2023 (www.justkannada.in): ಬೆಳಗಾವಿ ಜೈಲಿನಲ್ಲಿರುವ ವ್ಯಕ್ತಿಯೊಬ್ಬರಿಂದ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿದುಬಂದಿದೆ.

ಕರೆ ಮಾಡಿದವರನ್ನು ಜಯೇಶ್ ಕಾಂತ ಎಂದು ಗುರುತಿಸಲಾಗಿದೆ.

ಕೇಂದ್ರ ಸಚಿವ ʻನಿತಿನ್ ಗಡ್ಕರಿʼಗೆ ಕೊಲೆ ಬೆದರಿಕೆ ಕರೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ ಪೊಲೀಸರು ಕರೆ ಮಾಡಿದವನ ಗುರುತು ಪತ್ತೆಹಚ್ಚಿದ್ದಾರೆ.

ನಾಗ್ಪುರ ಪೊಲೀಸರ ತಂಡವು ತನಿಖೆಗಾಗಿ ಬೆಳಗಾವಿಗೆ ತೆರಳಿದೆ ಮತ್ತು ಪ್ರೊಡಕ್ಷನ್ ರಿಮಾಂಡ್ ಕೇಳಿದೆ ಎಂದು ನಾಗ್ಪುರದ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸ ಮತ್ತು ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.