Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅಂಡರ್ 19 ವಿಶ್ವಕಪ್‌ ‘ಹೀರೋ’ ಮನ್ಜೋತ್ ಕಲ್ರಾ ರಣಜಿ ಕ್ರಿಕೆಟ್’ನಿಂದ ಅಮಾನತು

ಅಂಡರ್ 19 ವಿಶ್ವಕಪ್‌ ‘ಹೀರೋ’ ಮನ್ಜೋತ್ ಕಲ್ರಾ ರಣಜಿ ಕ್ರಿಕೆಟ್’ನಿಂದ ಅಮಾನತು

ಬೆಂಗಳೂರು, ಜನವರಿ 02, 2019 (www.justkannada.in): ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಮನ್ಜೋತ್ ಕಲ್ರಾ, ರಣಜಿ ಟ್ರೋಫಿ ಟೂರ್ನಿಯಿಂದ ಅಮಾನತಾಗಿದ್ದಾರೆ.

ಅಂಡರ್ 16, ಅಂಡರ್ 19 ದಿನಗಳಲ್ಲಿ ವಯಸ್ಸಿನ ವಂಚನೆಯ ಆರೋಪಕ್ಕಾಗಿ ಡೆಲ್ಲಿ ಆಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಒಂಬುಡ್ಸ್ಮನ್, ಮನ್ಜೋತ್‌ಗೆ ರಣಜಿಯಿಂದ 1 ವರ್ಷದ ನಿಷೇಧ ವಿಧಿಸಿದೆ.

ವಯಸ್ಸಿನ ದಾಖಲೆಯಲ್ಲಿನ ವಂಚನೆಯ ಆರೋಪ ಡೆಲ್ಲಿ ತಂಡದ ಉಪನಾಯಕ ನಿತೀಶ್ ರಾಣಾ ಮೇಲೂ ಕೇಳಿ ಬಂದಿದೆ. ಜೂನಿಯರ್ ಲೆವೆಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ರಾಣಾ ಕೂಡ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.