ಬಸ್ ಮೇಲೆ ಆನೆ ದಾಳಿಗೆ ಯತ್ನ: ಪ್ರಯಾಣಿಕರ ಕೂಗಾಟ ಕೇಳಿ ಕಾಲ್ಕಿತ್ತ ಒಂಟಿ ಸಲಗ

Promotion

ಮೈಸೂರು,ಜೂ,5,2019(www.justkannada.in): ಬಸ್ ಮೇಲೆ ಆನೆ ಏಕಾಏಕಿ ದಾಳಿ ಮಾಡಲು ಯತ್ನಿಸಿದ ಪರಿಣಾಮ ಬಸ್ ಚಾಲಕ ಅರ್ಧ ಕಿ.ಮೀ ಬಸ್‌ ಹಿಮ್ಮುಖವಾಗಿ ಚಾಲನೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ವಲಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕೇರಳ ನೋಂದಣಿಯ ಬಸ್ ಈ ಮಾರ್ಗದ ಮೂಲಕ ಮಾನಂದವಾಡಿ ಕಡೆಗೆ ತೆರಳುತ್ತಿತ್ತು. ಈ ವೇಳೇ ಗಂಡು ಆನೆ ಏಕಾಏಕಿ ಬಸ್ ಮೇಲೆ ದಾಳಿಗೆ ಯತ್ನಿಸಿದೆ.

ಈ ಸಂದರ್ಭದಲ್ಲಿ ಚಾಲಕ ಬಸ್ ಅನ್ನ ಅರ್ಧ ಕಿ.ಮೀ ಬಸ್‌ ಹಿಮ್ಮುಖವಾಗಿ ಚಾಲನೆ ಮಾಡಿದ್ದಾರೆ. ಆನೆ ಅಟ್ಟಿಸಿಕೊಂಡು ಬಂದ ಹಿನ್ನಲೆ ಹಿಮ್ಮುಖವಾಗಿ ಚಾಲನೆ ಮಾಡಿದ್ದು ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕೂಗಾಡಿದ್ದಾರೆ. ಪ್ರಯಾಣಿಕರ ಕಿರುಚಾಟದಿಂದ ಹೆದರಿದ ಆನೆ ಓಡಿಹೋಗಿದೆ . ಆನೆ ಓಡಿ ಹೋದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Key words: Mysore: try to attack the elephant on the bus.

#mysore #attack #elephant #bus.