ಸಂಚಾರಿ ವಾಹನ ತಪಾಸಣೆ: ಸಿಂಗಲ್ ಸ್ಟಾರ್ ಗಿಂತ ಕೆಳಗಿನವರಿಗೆ ಅಧಿಕಾರವಿಲ್ಲ. ಇದನ್ನು ಉಲ್ಲಂಘಿಸಿದರೆ ದೂರು ನೀಡಿ : ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ.

 

ಮೈಸೂರು, ಮಾ.26, 2021 : ಸಂಚಾರಿ ವಾಹನ ತಪಾಸಣೆ ಸಂಬಂಧ ಮೈಸೂರು ನಗರ ಪೊಲೀಸರಿಗೆ ಕೆಲ ಹೊಸ ನೀತಿ, ನಿಯಮಗಳನ್ನು ಜಾರಿಗೊಳಿಸಲು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮುಂದಾಗಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಹೇಳಿದಿಷ್ಟು..

mysore-city-police-traffic-rules-commissioner-dr.cagandra.guptha-accident
ವಾಹನ ಸಂಚಾರ ತಪಾಸಣೆಯನ್ನು ಪೀಕ್ ಅವರ್ಸ್ ಹೊರತು ಪಡಿಸಿದ ಸಮಯದಲ್ಲಿ ನಡೆಸಬೇಕು. ಬೆಳಗ್ಗೆ 10.30 ರಿಂದ 11.30 ರ ತನಕ ಹಾಗೂ ಮಧ್ಯಾಹ್ನ 3 ರಿಂದ 5 ರ ತನಕ ತಪಾಸಣೆ ನಡೆಸಬೇಕು.
ಪ್ರತಿ ಶನಿವಾರ ಮತ್ತು ಭಾನುವಾರ ಪೊಲೀಸ್ ಠಾಣೆಯಲ್ಲೇ ದಂಡ ಸಂಗ್ರಹ ಸಂಬಂಧ ವಿಶೇಷ ಕೌಂಟರ್ ಆರಂಭಿಸಲಾಗುತ್ತದೆ. ಸ್ವಯಂ ಪ್ರೇರಿತರಾಗಿ ಸಾರ್ವಜನಿಕರೆ ತೆರಳಿ ವಾಹನದ ದಂಡ ಶುಲ್ಕದ ವಿವರ ಪಡೆದು ಹಣ ಪಾವತಿಸಬಹುದು.
ಸಿಂಗಲ್ ಸ್ಟಾರ್ (ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ -ASI ) ಹಾಗೂ ಅದರ ಮೇಲಿನ ಹಂತದ ಪೊಲೀಸರಿಗೆ ಮಾತ್ರ ತಪಾಸಣೆ ನಡೆಸುವ ಅಧಿಕಾರ. ಕಾನ್ ಸ್ಟೇಬಲ್ ಹಾಗೂ ಹೋಂ ಗಾರ್ಡ್ ನವರಿಗೆ ವಾಹನ ಸವಾರರ ತಪಾಸಣೆ ನಡೆಸುವ ಅಧಿಕಾರವಿಲ್ಲ.
ಅಪಘಾತ ವಲಯಗಳಲ್ಲಿ ಮಾತ್ರ ಪೂರ್ಣ ಪ್ರಮಾಣದ ತನಿಖೆ ನಡೆಸಬೇಕು. ರಿಂಗ್ ರಸ್ತೆಯಲ್ಲಿ ಕೇವಲ ಅತೀ ವೇಗ (ಒವರ್ ಸ್ಪೀಡ್) ಹಾಗೂ ಕುಡಿದು ವಾಹನ ಚಲಾಯಿಸುವುದು ( ಡ್ರಂಕ್ ಅಂಡ್ ಡ್ರೈವ್ ) ಮಾತ್ರ ತಪಾಸಣೆ ನಡೆಸಬೇಕು. ಹೆಲ್ಮೆಟ್, ಡಿಲ್, ಇನ್ಸ್ಶೂರೆನ್ಸ್, ಆರ್ಸಿ ತಪಾಸಣೆ ಈ ಸ್ಥಳದಲ್ಲಿ ನಡೆಸುವಂತಿಲ್ಲ.
ಇದನ್ನು ಉಲ್ಲಂಘಿಸಿ ಪೊಲೀಸರು ತಪಾಸಣೆ ನಡೆಸಿದರೆ ಕೂಡಲೇ ಆಯುಕ್ತರ ಕಚೇರಿಗೆ ದೂರು ನೀಡಿ. ಆಗ ಅಂಥಹ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

36 ಲಕ್ಷ ಕೇಸ್‌ಗಳು ಬಾಕಿ:

ಮೈಸೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ 36 ಲಕ್ಷ ಕೇಸ್‌ಗಳು ಬಾಕಿ ಇವೆ. 2016 ರಿಂದ ಇದುವರೆಗೆ 36 ಲಕ್ಷ ಕೇಸ್ ಬಾಕಿ ಉಳಿದಿವೆ. ಸರ್ಕಾರಕ್ಕೆ ದಂಡ ರೂಪದಲ್ಲಿ ಬರಬೇಕಾದ ಇಷ್ಟು ಆದಾಯ ಕುಂಠಿತವಾಗಿರುವ ಬಗ್ಗೆ ಆಡಿಟ್ ಆಕ್ಷೇಪ.

mysore-city-police-traffic-rules-commissioner-dr.cagandra.guptha-accident
ಮೈಸೂರಿನಲ್ಲಿ ನಿತ್ಯ ಅಂದಾಜು 5000 ಕ್ಕೂ ಹೆಚ್ಚು ಸಂಚಾರ ನಿಮಯ ಉಲ್ಲಂಘನೆ ಕೇಸ್ ದಾಖಲಾಗುತ್ತಿವೆ. ಈ ಪೈಕಿ 500 ಪ್ರಕರಣಗಳು ಮಾತ್ರ ಪೊಲೀಸರ ಫಿಸಿಕಲ್ ವೇರಿಫೀಕೇಷನ್ ನಿಂದ ದಾಖಲಾಗುತ್ತಿವೆ. ಉಳಿದ 4500 ಕೇಸ್‌ಗಳು ಸಿಸಿ ಕ್ಯಾಮರಾ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ದಾಖಲಾಗುತ್ತಿವೆ‌ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ವಿವರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತಿ. ಸಂಚಾರಿ ಎಸಿಪಿ ಸಂದೇಶ್ ಕುಮಾರ್ ಹಾಜರಿದ್ದರು.

key words : mysore-city-police-traffic-rules-commissioner-dr.chandra.guptha-accident