ಶಾಸಕ ತನ್ವೀರ್ ಸೇಠ್ ಗುಣಮುಖರಾಗಲೆಂದು ಆಸ್ಪತ್ರೆ ಒಳ‌ ಭಾಗದಲ್ಲೇ ಮೌಲ್ವಿಗಳಿಂದ ಸಾಮೂಹಿಕ ಪ್ರಾರ್ಥನೆ…

Promotion

ಮೈಸೂರು,ನ,18,2019(www.justkannada.in): ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್  ಗುಣಮುಖರಾಗಲೆಂದು ಆಸ್ಪತ್ರೆ ಒಳ‌ ಭಾಗದಲ್ಲೇ ಮೌಲ್ವಿಗಳು ಸಾಮೂಹಿಕ ಪ್ರಾರ್ಥನೆ ಮಾಡಿದರು.

ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಮೈಸೂರಿನ ಮಸೀದಿ, ದರ್ಗಾಗಳಿಂದ ಮೌಲ್ವಿಗಳು ಆಗಮಿಸಿದ್ದರು. ಈ ವೇಳೆ ಆಸ್ಪತ್ರೆ ಒಳಗಡೆಯೇ ಶಾಸಕ ತನ್ವೀರ್ ಸೇಠ್ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ  ಶಾಸಕ ತನ್ವೀರ್ ಸೇಠ್ ಪುತ್ರ ಜಾವೀದ್ ಸೇಠ್ ಭಾಗಿ‌ಯಾಗಿದ್ದರು.

ಪ್ರಾರ್ಥನೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಧರ್ಮ ಗುರುಗಳು. ತನ್ವೀರ್ ಸೇಠ್ ಅವರು ಜನಾನುರಾಗಿ ನಾಯಕ. ಅಂತವರ ಮೇಲೆ ಹಲ್ಲೆ ಆಗಿರುವುದು ಖಂಡನೀಯ‌. ಅವರು ಅತಿ ಶೀಘ್ರವಾಗಿ ಗುಣಮುಖರಾಗನಬೇಂಕೆಂಬುದು ನಮ್ಮ ಪ್ರಾರ್ಥನೆಯಾಗಿದೆ. ಅದಕ್ಕಾಗಿ ನಾವೇಲ್ಲಾ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

Key words: Mass prayers –hospital –Moulvi- MLA Tanveer Seth – Be cure