ಮಂಡ್ಯದ ಫೈನಲ್ ರಿಸಲ್ಟ್ ನನಗೆ ಪಾಸಿಟಿವ್ ಆಗುತ್ತೆ- ತಾಯಿ ಚಾಮುಂಡೇಶ್ವರಿ ದರ್ಶನ ಬಳಿಕ ವಿಶ್ವಸ ವ್ಯಕ್ತಪಡಿಸಿದ  ಸುಮಲತಾ ಅಂಬರೀಶ್..

Promotion

ಮೈಸೂರು,ಮೇ,23,2019(www.justkannada.in): ಮಂಡ್ಯದ ಫೈನಲ್ ರಿಸಲ್ಟ್ ನನಗೆ ಪಾಸಿಟಿವ್ ಆಗುತ್ತೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ  ಮಾತನಾಡಿದ ಸುಮಲತಾ ಅಂಬರೀಶ್,  ಮಂಡ್ಯದ ಜನ ಯಾವಗ್ಲೂ ಕೈ ಹಿಡಿದಿದ್ದಾರೆ, ಈಗಲೂ ಕೈ ಹಿಡಿಯುತ್ತಾರೆ. ಮಂಡ್ಯಕ್ಕೆ ಹೋಗೋ ಬಗ್ಗೆ ಮತ್ತೆ ಹೇಳ್ತೇನೆ. ರಿಸಲ್ಟ್ ಹೇಗೆ ಬಂದ್ರೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ದ ಮುನ್ನಡೆ ಸಾಧಿಸಿದ್ದಾರೆ.

Key words: Mandya’s Final Result is positive for me- sumalatha ambarish

#Election2019 #result