Thursday, September 3, 2026

BDA Apartments

Home Election News and Analysis ಆಂಧ್ರ ಪ್ರದೇಶ ವಿಧಾನ ಸಭೆ ಚುನಾವಣೆ: ಜಗನ್ ಮೋಹನ್ ರೆಡ್ಡಿಗೆ ಬಹುಪರಾಕ್ ಹೇಳಿದ್ದಾನೆ, ಇಂದು ಸಂಜೆ...

ಆಂಧ್ರ ಪ್ರದೇಶ ವಿಧಾನ ಸಭೆ ಚುನಾವಣೆ: ಜಗನ್ ಮೋಹನ್ ರೆಡ್ಡಿಗೆ ಬಹುಪರಾಕ್ ಹೇಳಿದ್ದಾನೆ, ಇಂದು ಸಂಜೆ ಚಂದ್ರಬಾಬು ಬಾಯ್ಡು ಸಿಎಂ ಸ್ಥಾನಕ್ಕೆ ರಾಜೀನಾಮೆ

ಆಂಧ್ರ ಪ್ರದೇಶ, ಮೇ 23, 2019 (www.justkannada.in): ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ 175 ಕ್ಷೇತ್ರಗಳ ಪೈಕಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಈ ಮೂಲಕ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಅದರೊಂದಿಗೆ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಹೀನಾಯ ಸೋಲು ಕಂಡಿದೆ.

ಮೇ 25ರಂದು ಜಗನ್ ತಮ್ಮ ಪಕ್ಷದ ಶಾಸಕರ ಸಭೆ ಕರೆದಿದ್ದು, ಮೇ 30ರಂದು ಪ್ರಮಾಣವಚನ ಸಾಧ್ಯತೆ ಇದೆ. ಮತದಾನದ ವೇಳೆ ಸಾಕಷ್ಟು ಗಲಭೆಗೆ ಸಾಕ್ಷಿಯಾಗಿದ್ದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಜಗನ್ ಮೋಹನ್ ರೆಡ್ಡಿಗೆ ಬಹುಪರಾಕ್ ಹೇಳಿದ್ದಾನೆ.