Wednesday, October 21, 2026

Dasara Wishes

ಸಂವಿಧಾನದಂತೆ ನಡೆದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ- ಸಿಎಂ ಸಿದ‍್ಧರಾಮಯ್ಯ ...
Happy Dasara
Home Front Page ವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ- ಸಚಿವ ಎಂ‌.ಬಿ ಪಾಟೀಲ್

ವಿಪ್ರೋ- ಕವಾಸಕಿ ಕಂಪನಿಯಿಂದ ₹1,000 ಕೋಟಿ ಹೂಡಿಕೆ- ಸಚಿವ ಎಂ‌.ಬಿ ಪಾಟೀಲ್

ಬೆಂಗಳೂರು,ಸೆಪ್ಟಂಬರ್,3,2026 (www.justkannada.in):  ಹೈಡ್ರಾಲಿಕ್ ಪಂಪ್ ತಯಾರಿಕೆಗೆ ಹೆಸರಾಗಿರುವ ವಿಪ್ರೋ‌ – ಕವಾಸಕಿ ಪ್ರಿಸಿಷನ್ ಮಷಿನರಿ ಕಂಪನಿಯು ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲು ಮುಂದೆ ಬಂದಿದೆ. ಇದಕ್ಕಾಗಿ ಕಂಪನಿಯು 1,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ 1,200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ತಮ್ಮನ್ನು ಇಲ್ಲಿನ‌ ಖನಿಜ ಭವನದಲ್ಲಿ ಭೇಟಿಯಾದ ಕಂಪನಿಯ ಸಿಇಒ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಸಚಿವ ಎಂ.ಬಿ ಪಾಟೀಲ್ ಅವರು ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಜಪಾನ್ ಮೂಲದ ಕವಾಸಕಿ ಕಂಪನಿ, ವಿಪ್ರೊ ಜತೆ ಸೇರಿ 30 ಎಕರೆ ಭೂಮಿ‌ ಕೇಳಿವೆ.‌ ಇದನ್ನು ನಾವು ತ್ವರಿತವಾಗಿ ಒದಗಿಸುತ್ತೇವೆ. ನೂತನ ಉತ್ಪಾದನಾ ಸ್ಥಾವರವು ಇನ್ನು ಒಂದು ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.

ಕಂಪನಿಯು ಈಗ ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದಲ್ಲಿ ಒಂದು ತಯಾರಿಕಾ ಘಟಕ ಹೊಂದಿದ್ದು, ಅಲ್ಲಿ ವರ್ಷಕ್ಕೆ 80 ಸಾವಿರ ಹೈಡ್ರಾಲಿಕ್ ಪಂಪ್ ತಯಾರಿಸಲಾಗುತ್ತಿದೆ. ಉದ್ದೇಶಿತ ಘಟಕವು ಕಂಪನಿಯ ತಯಾರಿಕಾ ಚಟುವಟಿಕೆಯ ವಿಸ್ತರಣೆಯಾಗಿದೆ. ಇಲ್ಲಿ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್‌ಗಳನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.ವಿಪ್ರೋ mbp

ವಿಪ್ರೋ ಕವಾಸಕಿ ಕಂಪನಿಯ ಈ ಯೋಜನೆ ಆಕರ್ಷಕವಾಗಿದೆ. ಹೀಗಾಗಿ ಕಂಪನಿಗೆ ಈಗಿನಿಂದಲೇ ಅಗತ್ಯ ಕೆಲಸಗಳನ್ನು ಆರಂಭಿಸುವಂತೆ ಕೋರಲಾಗಿದೆ. ಈ ಹೂಡಿಕೆ ಯೋಜನೆಗೆ ಮುಂದಿನ ಸಭೆಯಲ್ಲಿ ಅಂತಿಮ ಅನುಮೋದನೆ ಕೊಡಲಾಗುವುದು ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಈ ಹೈಡ್ರಾಲಿಕ್ಸ್ ಪಂಪ್ ಗಳನ್ನು ಜೆಸಿಬಿ ಸೇರಿದಂತೆ ಇತರ ಭೂ ಸಂಬಂಧಿ ಕಾಮಗಾರಿಗಳನ್ನು ನಡೆಸಲು ಉಪಯೋಗಿಸುವ ಯಂತ್ರಗಳಲ್ಲಿ ಬಳಸಲಾಗುತ್ತದೆ.ವಿಪ್ರೋ jk02_new jk02 new

ಮಾತುಕತೆಯಲ್ಲಿ ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್. ರಾಜೇಶ್, ಸಿಎಫ್ಒ ಉದಯ ರಾಘವನ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

Key words: Wipro-Kawasaki company, invest, ₹1,000 crore, Minister, M.B. Patil