ನನ್ನ ಸೋಲಿನ ಹೊಣೆ ನಾನೇ ಹೊರುತ್ತೇನೆ- ಧೃವನಾರಾಯಣ್…

Promotion

ಮೈಸೂರು,ಮೇ,25,2019(www.justkannada.in): ನನ್ನ ಸೋಲಿಗೆ ನಾನೇ ಕಾರಣ. ನನ್ನ ಸೋಲಿನ ಹೊಣೆಯನ್ನ ನಾನೇ ಹೊರುತ್ತೇನೆ ಎಂದು ಚಾಮರಾಜನಗರ ಪರಾಜಿತ ಅಭ್ಯಥರ್ಿ ಧೃವನಾರಾಯಣ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಧೃವನಾರಾಯಣ್, ನನ್ನ ಸೋಲಿನ ಹೊಣೆಯನ್ನ ಬೇರೆ ಯಾರ ಮೇಲೂ ಹೊರಿಸಲು ಇಷ್ಟಪಡುವುದಿಲ್ಲ. ನನ್ನ ಸೋಲಿನ ಹೊಣೆಯನ್ನ ನಾನೇ ಹೊರುತ್ತೇನೆ. ತುಂಬಾ ಕಡಿಮೆ ಅಂತರದಲ್ಲಿ ನಾನು ಸೋತಿದ್ದೇನೆ. ಚುನಾವಣೆ ಮುನ್ನ ಸರಿಯಾದ ಹೊಂದಾಣಿಕೆ ಮಾಡಿಕೊಂಡಿದ್ದರೇ ಇಷ್ಟು ಸಿಟು ಕಳೆದುಕೊಳ್ಳುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೀಟ್ ಹಂಚುವಾಗಲೇ ಸಾಕಷ್ಟು ಗೊಂದಲ ಆಗಿತ್ತು. ಆ ಗೊಂದಲ ನಿವಾರಣೆ ಮಾಡಿಕೊಳ್ಳುವ ಹೊತ್ತಿಗೆ ಚುನಾವಣೆ ಬಂದಿದೆ. ನನ್ನ ಅಭಿಪ್ರಾಯದ ಪ್ರಕಾರ ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿಲ್ಲ. ನಾವು ಕೂಡ ಬಿಜೆಪಿಗಿಂತ ಚೆನ್ನಾಗಿಯೇ ಪ್ರಚಾರ ಮಾಡಿದ್ದವು. ಆದ್ರು ಕೂಡ ನಾವು ಸೋತಿದ್ದು ಬೇಸರ ತರಿಸಿದೆ ಎಂದರು.

15 ವರ್ಷ ಚುನಾಯಿತನಾಗಿ ಮಾಡಿದ್ದಕ್ಕೆ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆಯೂ ಸಹ ಪಕ್ಷದ ಹಿರಿಯರ ಜತೆ ಚಚರ್ೆ ಮಾಡುತ್ತೇನೆ ಎಂದು ಧೃವನಾರಾಯಣ್ ತಿಳಿಸಿದರು.

key words: #lokasabhaelection #chamarajanagar #druvanarayan #mysore