ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದ ಸ್ಟಾರ್ ವಾರ್: ಪ್ರಧಾನಿ ಮೋದಿ ಗೆಲುವಿಗೆ ರಮ್ಯಾ ಕಾಲೆಳೆದ ಶಿಲ್ಪಾ ಗಣೇಶ್…

ಬೆಂಗಳೂರು,ಮೇ,25,2019(www.justkannada.in): ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ವಾರ್ ಮುಂದುವರೆದಿದ್ದು ಪ್ರಧಾನಿ ನರೇಂದ್ರ ಮೋದಿ ಗೆಲುವಿನ ವಿಚಾರ ಪ್ರಸ್ತಾಪಿಸಿ ಟ್ವಿಟ್ಟರ್ ನಲ್ಲಿ ಶಿಲ್ಪಾ ಗಣೇಶ್ ಮಾಜಿ ಸಂಸದೆ ರಮ್ಯಾ ಕಾಲೆಳೆದಿದ್ದಾರೆ.

ಶಿಲ್ಪಾ ಗಣೇಶ್ ಹಾಗೂ ಮಾಜಿ ಸಂಸದೆ ರಮ್ಯಾ ನಡುವೆ ಆಗಾಗ್ಗೆ ಟ್ವಿಟ್ ವಾರ್ ನಡೆಯುತ್ತಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಇದು ಮುಂದುವರೆದಿದೆ.

ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಗೆಲವಿಗೆ ಶುಭಕೋರಿದ ನಟಿ ರಮ್ಯಾಗೆ ಶಿಲ್ಪಾ ಗಣೇಶ್ ಕಿಚಾಯಿಸಿದ್ದಾರೆ. ರಮ್ಯಾ ಎಲ್ಲಿದ್ದಿಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವಿಟ್ ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು. ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡುವ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು ಎಂದು ಶಿಲ್ಪಾ ಗಣೇಶ್ ಟ್ವಿಟ್ ಮಾಡಿ ರಮ್ಯಾ ಕಾಲೆಳೆದಿದ್ದಾರೆ.

ಯಾವಾಗಲೂ ಪ್ರಧಾನಿ ಮೋದಿಯನ್ನ ಟೀಕಿಸುವ ರಮ್ಯಾ ಇದೀಗ ಪ್ರಧಾನಿ ಮೋದಿ ಅವರ ಗೆಲುವಿಗೆ ವಿಶ್ ಮಾಡಿದ್ದರು.

key words: #ramya #shilpaganesh #tweet #pmmodi